ನವದೆಹಲಿ: ಮಧ್ಯಪ್ರದೇಶ (Madhya Pradesh) ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿ (BJP) ಐತಿಹಾಸಿಕ ಗೆಲುವು ಸಾಧಿಸಿದೆ. ಆಡಳಿತ ವಿರೋಧಿ ಅಲೆಯನ್ನು ಮೀರಿ ಭಾರೀ ಬಹುಮತಗಳಿಸುವ ಮೂಲಕ ಜಯದ ನಗೆ ಬೀರಿದೆ. ಈ ಗೆಲುವು ಬಿಜೆಪಿ ವಲಯದಲ್ಲಿ ರಣೋತ್ಸಾಹ ಮೂಡಿಸಿದ್ದರೂ ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ (Jyotiraditya Scindia) ಬಣಕ್ಕೆ ಇದು ಹೆಚ್ಚು ಖುಷಿ ತಂದು ಕೊಟ್ಟಿಲ್ಲ.
ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆದರೂ ಸಿಂಧಿಯಾ ಪ್ರಭಾವ ಇರುವ ಚಂಬಲ್ ಪ್ರದೇಶದಲ್ಲಿ (Chambal Region) ಬಿಜೆಪಿಗೆ ದೊಡ್ಡ ಲಾಭವಾಗಿಲ್ಲ. ಚಂಬಲ್ ಪ್ರದೇಶದ 34 ಸ್ಥಾನಗಳಲ್ಲಿ ಬಿಜೆಪಿ ಸುಮಾರು 18 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 16 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಜೋತಿರಾದಿತ್ಯ ಸಿಂಧಿಯಾ ಇಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಇದನ್ನೂ ಓದಿ: ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್
ಇದಕ್ಕೂ ಮುಖ್ಯವಾಗಿ ಚಂಬಲ್ ಪ್ರದೇಶದಲ್ಲಿ ಸ್ಪರ್ಧಿಸಿದ್ದ ಸಿಂಧಿಯಾ ಬೆಂಬಲಿಗರ ಪೈಕಿ ಅರ್ಧದಷ್ಟು ಜನರು ಸೋತಿದ್ದಾರೆ. ಸಿಂಧಿಯಾ ಬೆಂಬಲಿಗರು ಸುಮಾರು 13 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ 8 ಸಿಂಧಿಯಾ ಬೆಂಬಲಿಗರು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ರಘುರಾಜ್ ಸಿಂಗ್ ಕಂಸಾನಾ, ಕಮಲೇಶ್ ಜಾತವ್, ಇಮಾರ್ತಿ ದೇವಿ, ಮಾಯಾ ಸಿಂಗ್, ಸುರೇಶ್ ಧಕಡ್, ಮಹೇಂದ್ರ ಸಿಸೋಡಿಯಾ, ಜಸ್ಪಾಲ್ ಜಜ್ಜಿ ಮತ್ತು ಹಿರೇಂದ್ರ ಸಿಂಗ್ ಬನಾ ಸೋತು ಮನೆ ಸೇರಿದ್ದಾರೆ. ಇದನ್ನೂ ಓದಿ: ಗೆದ್ದ ಮರುದಿನವೇ ರಸ್ತೆಬದಿಯಲ್ಲಿನ ಮಾಂಸದಂಗಡಿಗಳ ತೆರವಿಗೆ ಬಿಜೆಪಿ ನೂತನ ಶಾಸಕ ಆದೇಶ
ಸಿಂಧಿಯಾ 2018ರಲ್ಲಿ ಕಾಂಗ್ರೆಸ್‌ನಲ್ಲಿದ್ದಾಗ ಗ್ವಾಲಿಯರ್ ಚಂಬಲ್ ಪ್ರದೇಶದಲ್ಲಿ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ (Congress) ತೊರೆದಿದ್ದ ಸಿಂಧಿಯಾ ಅವರಿಗೆ ಬಿಜೆಪಿ ಕೇಂದ್ರ ಸಚಿವ ಸ್ಥಾನವನ್ನು ನೀಡಿತ್ತು. ಈ ಬಾರಿಯ ಫಲಿತಾಂಶ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರ ರಾಜಕೀಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸದ್ಯ ಸಿಂಧಿಯಾ ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದು, ಬಿಜೆಪಿ ಹೈಕಮಾಂಡ್ ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ವೈಯಕ್ತಿಕ ದುಃಖದ ನಡುವೆಯೂ ಗೆಲುವಿಗೆ ಶ್ರಮಿಸಿದ್ರು- ನಡ್ಡಾ ಕೊಂಡಾಡಿದ ಪ್ರಧಾನಿ