ಕೈ ಗ್ಯಾರಂಟಿಯೋ – ಮೋದಿ ಜನಪ್ರಿಯತೆಯೋ; ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ – ಯಾರಿಗೆ ಎಲ್ಲಿ ಸಿಗುತ್ತೆ ಅಧಿಕಾರದ ಚುಕ್ಕಾಣಿ?

Public TV
1 Min Read
Voting

ಹೈದರಾಬಾದ್‌: 2024ರ ಲೋಕಸಭಾ ಚುನಾವಣೆಗೆ (LokSabha Elections) ರಾಷ್ಟ್ರೀಯ ಪಕ್ಷಗಳಿಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಪೈಕಿ 4 ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ (4  State Elections Result)  ಇಂದು ಹೊರಬೀಳಲಿದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ (Telangana), ಛತ್ತೀಸ್ ಗಡಗಳಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಮಿಜೋರಂನಲ್ಲಿ ಸೋಮವಾರ (ಡಿ.4) ರಂದು ಮತ ಎಣಿಕೆ ನಡೆಯಲಿದೆ.

KC Chandrasekhar Rao Telangana Munugode by election

ಮಿಜೋರಂನಲ್ಲಿ ಭಾನುವಾರ ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾಗಿದ್ದು, ಎನ್‌ಜಿಒ ಸಮನ್ವಯ ಸಮಿತಿ ಪ್ರತಿಭಟನೆಗಳನ್ನು ನಡೆಸಿದ್ದವು. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಮತ ಎಣಿಕೆ ಕಾರ್ಯವನ್ನು ಡಿಸೆಂಬರ್‌ 4ಕ್ಕೆ ಮುಂದೂಡಿದೆ. ಚುನಾವಣೋತ್ತರ ಸಮೀಕ್ಷೆ(Exit Poll) ನಲ್ಲಿ ಬಿಜೆಪಿ- ಕಾಂಗ್ರೆಸ್ (BJP-Congress) 50-50 ಸಾಧ್ಯತೆಗಳನ್ನು ಹೇಳಿರುವುದರಿಂದ ಇಡೀ ದೇಶ ಈ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

MODI RAHUL OWAISI

ಇನ್ನೂ ಕಾಂಗ್ರೆಸ್‌ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿರೋ ರಾಜ್ಯಗಳ ಶಾಸಕರನ್ನ ರಕ್ಷಿಸಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡ್ತಿದೆ. ತೆಲಂಗಾಣ ಮತ್ತು ಛತ್ತೀಸ್‌ಘಡದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದು, ಫಲಿತಾಂಶ ಬರುತ್ತಿದ್ದಂತೆ ಕಾಂಗ್ರೆಸ್‌ ಶಾಸಕರನ್ನು ಕರ್ನಾಟಕ್ಕೆ ಕರೆತರುವ ಪ್ರಯತ್ನ ಮಾಡಲಾಗಿದೆ. ಇದನ್ನೂ ಓದಿ: ಲೋಕಸಭೆಗೆ ಮುನ್ನ ಮೋದಿಗೆ ಅಗ್ನಿಪರೀಕ್ಷೆ; ತೆಲಂಗಾಣ ಆಪರೇಷನ್ ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಕವಚ  

ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತೀಸ್ ಗಡ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60.

Share This Article