‘ಫ್ಯಾಮಿಲಿ ಸ್ಟಾರ್’ ಜೊತೆ ಒಂದಾದ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ನಾಯಕಿಯಾಗಿ ನಟಿಸುವುದರ ಬದಲು ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ (Mrunal) ಕಾಂಬಿನೇಷನ್ ನ ಫ್ಯಾಮಿಲಿ ಸ್ಟಾರ್  (Family Star) ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

rashmika mandanna 9

ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಸದ್ಯ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಂಡದ ಜೊತೆ ನಟಿ ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಬಗ್ಗೆ ಹಲವು ವಿಚಾರಗಳ ಮಾತನಾಡಿದರು. ಈ ವೇಳೆ, ಮತ್ತೆ ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರಾ ಎಂಬ ಮಾತು ತೂರಿ ಬಂತು.

ಈ ಕುರಿತು ಮಾತನಾಡಿರುವ ರಶ್ಮಿಕಾ, ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಕನ್ನಡದಲ್ಲಿ ಡಬ್ ಮಾಡುವ ಅವಕಾಶ ಸಿಕ್ಕರೆ, ಖಂಡಿತಾ ಮಾಡ್ತೀನಿ. ಇನ್ನೂ ನನಗೆ ಅನಿಸುತ್ತಾ ಇಲ್ಲ, ನಾನು ಕನ್ನಡ ಇಂಡಸ್ಟ್ರಿಯಿಂದ ದೂರ ಇದ್ದೀನಿ ಅಂತ. ಅದರಲ್ಲೂ ಕನ್ನಡದ ಸಿನಿಮಾ ಬಗ್ಗೆ ಇದೀಗ ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಸದ್ಯದಲ್ಲೇ ಮಾಹಿತಿ ಕೊಡ್ತೀನಿ. ಅವಕಾಶ ಸಿಕ್ಕರೆ ಕಂಡಿತಾ ಕನ್ನಡದ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದಾರೆ.

Share This Article