ಶ್ರೀಲೀಲಾಗೆ ಲಕ್ ಕೈ ಕೊಡ್ತಾ? ನಟಿಸಿದ ಎರಡೂ ಸಿನಿಮಾ ಅಟ್ಟರ್ ಫ್ಲಾಪ್

Public TV
1 Min Read
sreeleela 1

ಶ್ರೀಲೀಲಾ (Sreeleela) ಅಭಿಮಾನಿಗಳು ಕಂಗಾಲಾಗಿದ್ಧಾರೆ. ಇದೇನಾಗುತ್ತಿದೆ ನಮ್ಮ ದೇವತೆ ಬದುಕಿನಲ್ಲಿ? ನಾಯಕಿ ಪಟ್ಟ ಕಳೆದುಕೊಳ್ಳುತ್ತಾರಾ ಲೀಲಾ. ಅವಸರಕ್ಕೆ ಬಿದ್ದು ಅವಲಕ್ಷಣ ಮಾಡಿಸಿಕೊಂಡರಾ, ಪ್ರಿನ್ಸ್ ಹಾಗೂ ಪವನ್ ಕಲ್ಯಾಣ್ (Pawan Kalyan) ಸಿನಿಮಾ ಕೈ ಹಿಡಿಯದಿದ್ದರೆ ಭವಿಷ್ಯದ ಗತಿ ಏನು? ಇದು ಖುದ್ದು ಶ್ರೀಲೀಲಾಗೂ ಕಂಗಾಲು ಮಾಡಿದೆ. ಏನದು ಸೀಕ್ರೆಟ್.

sreeleela 2

ಶ್ರೀಲೀಲಾ ಅಭಿನಯದ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾದವು. ಅದರಲ್ಲಿ ಬಾಲಕೃಷ್ಣ (Balayya) ಜೊತೆ ನಟಿಸಿದ, ಅಂದರೆ ಮಗಳಾಗಿ ಕಾಣಿಸಿದ್ದ ಭಗವಂತ ಕೇಸರಿ ಹಿಟ್ ಆಯಿತು. ಆದರೆ ಕ್ರೆಡಿಟ್ ಪೂರ್ತಿ ಬಾಲಯ್ಯ ನುಂಗಿ ನೀರು ಕುಡಿದರು. ಶ್ರೀಲೀಲಾ ಗೆದ್ದೂ ಸೋತರು. ಈ ನಡುವೆ ‘ಸ್ಕಂದ’ (Skanda) ಹಾಗೂ ‘ಆದಿಕೇಶವ’ ಬಂತು ನೋಡಿ. ‘ಸ್ಕಂದ’ ಚಿತ್ರದಲ್ಲಿ ಹಾಡು ಕೆಲವು ದೃಶ್ಯ ಅಷ್ಟೇ ಪಾಲಿಗೆ ಬಂದ ಪಂಚಾಮೃತ. ಇದನ್ನೂ ಓದಿ:ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

sreeleela 6

ಹತ್ತತ್ತು ಸಿನಿಮಾ ಕೈಯಲ್ಲಿವೆ. ಹ್ಯಾಪ್‌ನಿಂಗ್ ಸ್ಟಾರ್ ಶ್ರೀಲೀಲಾಗೆ ಪ್ರಿನ್ಸ್ ಹಾಗೂ ಪವನ್ ಜೊತೆ ಅವಕಾಶ ಸಿಕ್ಕಿದೆ. ಈಗಾಗಲೇ ಶ್ರೀಲೀಲಾ ಫ್ಯಾನ್ಸ್ ದಿಕ್ಕೆಟ್ಟಿದ್ದಾರೆ. ‘ಗುಂಟೂರು ಖಾರಂ’ ಹಾಗೂ ‘ಉಸ್ತಾದ್ ಭಗತ್‌ಸಿಂಗ್’ ಎರಡರಲ್ಲೂ ಶ್ರೀಲೀಲಾಗೆ ಹಾಡು ಮತ್ತು ಕುಣಿತಕ್ಕಷ್ಟೇ ಜಾಗ ಕೊಟ್ಟರೆ ಬದುಕು ಕಷ್ಟ ಕಷ್ಟ.

ಅಕಸ್ಮಾತ್ ಅಲಾ ವೈಕುಂಠಪುರಂಲೋದಲ್ಲಿ ಪೂಜಾ ಹೆಗ್ಡೆಗೆ (Pooja Hegde) ಸಿಕ್ಕಂಥ ಅವಕಾಶ ಈಕೆಗೂ ದಕ್ಕಿದರೆ ಮಾತ್ರ ಬದುಕು ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ. ಮುಂಬರುವ ಅವಕಾಶಗಳಲ್ಲಿ ಶ್ರೀಲೀಲಾ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

Share This Article