ನಮ್ರತಾ ಜೊತೆಗಿನ ಫ್ಲರ್ಟ್ ಬಗ್ಗೆ ಸ್ನೇಹಿತ್‌ಗೆ ಕುಟುಕಿದ ಮೈಕಲ್

Public TV
1 Min Read
namratha gowda 2

ಬಿಗ್ ಬಾಸ್ ಮನೆಗೆ (Bigg Boss Kannada 10) ಮೊದಲು ಬಂದಾಗ ಸ್ನೇಹಿತ್ ಗೌಡ (Snehith Gowda) ಸಖತ್ ಸ್ಟ್ರಾಂಗ್ ಆಗಿ ಆಟ ಆಡುತ್ತಿದ್ದರು. ನಂತರದ ದಿನಗಳಲ್ಲಿ ನಮ್ರತಾ ಜೊತೆ ಜೋಡಿಯಾಗಿ ಹೈಲೆಟ್ ಆಗೋದು ಬಿಟ್ರೆ, ಟಾಸ್ಕ್‌ನಿಂದ ಸ್ನೇಹಿತ್ ಮುಂದೆ ಬರಲೇ ಇಲ್ಲ. ನೀನು, ನಮ್ರತಾ (Namratha Gowda) ಸುತ್ತಾಡಿಕೊಂಡಿದ್ದೀರಿ ಅಷ್ಟೇ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ನೇರವಾಗಿ ಮೈಕಲ್ ಹೇಳಿದ್ದಾರೆ.

namratha gowdaದೊಡ್ಮನೆ ಆಟ ಶುರುವಾದಾಗ ಮೊದಲ ವಾರದ ಕ್ಯಾಪ್ಟನ್ ಆಗಿ ಸ್ನೇಹಿತ್ ಗೌಡ, ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದರು. ಸಂಗೀತಾ-ಕಾರ್ತಿಕ್ ಅವರಂತೆಯೇ ಸ್ನೇಹಿತ್-ನಮ್ರತಾ ಪ್ರೇಮ ಪಕ್ಷಿಗಳಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಒಟಿಟಿಯತ್ತ ಮುಖ ಮಾಡಿದ ಕೀರ್ತಿ ಸುರೇಶ್

Ishani Michael 1

ನಮ್ರತಾಗೆ (Namratha Gowda) ಪ್ರೇಮ ನಿವೇದನೆ ಮಾಡುವುದು. ಫ್ಲರ್ಟ್ ಮಾಡೋದು ಬಿಟ್ಟರೇ ಸ್ನೇಹಿತ್ ಆಟ ಎಲ್ಲೂ ಹೈಲೆಟ್ ಆಗಲೇ ಇಲ್ಲ. ಇದನ್ನೇ ಈಗ ಕ್ಯಾಪ್ಟನ್ ಮೈಕಲ್, ಸ್ನೇಹಿತ್‌ಗೆ ಕಿವಿ ಹಿಂಡಿದ್ದಾರೆ. ನೀನು, ನಮ್ರತಾ ಓಡಾಡಿಕೊಂಡಿದ್ದಿರಿ, ಅದನ್ನೇ ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ನೇರವಾಗಿ ಸ್ನೇಹಿತ್‌ಗೆ ಮೈಕಲ್ ಹೇಳಿದ್ದಾರೆ. ಇದೀಗ ನಾನು ಆಡಲೇ ಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

ಈ ಘಟನೆ ನಡೆಯುವ ಮುನ್ನವೇ ಸ್ನೇಹಿತ್ ಗೌಡ, ನಮ್ರತಾ ಎದುರು ಕಣ್ಣೀರು ಹಾಕಿದ್ದಾರೆ. ಈ ವಾರ ಮನೆಯಿಂದ ನಾನೇ ಔಟ್ ಆಗೋದು ಎಂದು ಕಣ್ಣೀರಿಟ್ಟಿದ್ದಾರೆ. ಕಳೆದ ವಾರ ಬಾಟಮ್ ಲೈನ್‌ನಲ್ಲಿದ್ದರು. ಅತೀ ಕಡಿಮೆ ವೋಟ್ ಪಡೆದು ಸೇವ್ ಆಗಿದ್ದರು. ಹಾಗಾಗಿ ಈಗ ನೀತು ಎಲಿಮಿನೇಷನ್ ನಂತರ ತನ್ನ ಆಟ ಕೊನೆಗೊಳ್ಳಲಿದೆ ಎಂದು ಸ್ನೇಹಿತ್‌ಗೂ ಅನಿಸಿದೆ.

Share This Article