ಯಾರೇ ನಿಂತರೂ 2 ಲಕ್ಷ ಮತಗಳ ಅಂತರದಿಂದ ಗೆಲ್ತೀನಿ: ಪ್ರತಾಪ್‌ ಸಿಂಹ

Public TV
1 Min Read
prathap simha

ಮೈಸೂರು: ನನ್ನ ವಿರುದ್ಧ ಚುನಾವಣೆಯಲ್ಲಿ (Election) ಯಾವುದೇ ಅಭ್ಯರ್ಥಿ ನಿಂತರೂ 2 ಲಕ್ಷ ಮತಗಳ ಅಂತದಿಂದ ಗೆಲ್ಲುತ್ತೇನೆ ಎಂದು ಮೈಸೂರಿನ (Mysuru) ಬಿಜೆಪಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

ನಾನು ಒಂದು ರೀತಿಯಲ್ಲಿ ಎಲ್ಲಾ ಪಕ್ಷಗಳ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲಾ ಪಕ್ಷದಲ್ಲೂ ಮೋದಿ (PM Narendra Modi) ಅಭಿಮಾನಿಗಳಿದ್ದಾರೆ. ಅವರೆಲ್ಲರೂ ನನಗೆ ಮತ ಹಾಕುತ್ತಾರೆ. ಈಗ ಜೆಡಿಎಸ್‌ (JDS) ಕೂಡ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ ಎಂದು ತಿಳಿಸಿದರು.


ಹೆಸರು ಬದಲಾವಣೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್‌ ಸಿಂಹ ಹೆಸರು ಇರುವಂತೆ ಯಥಾವತ್ತಾಗಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ. ಈ ಬದಲಾವಣೆಗೂ ಚುನಾವಣೆಗೂ ಸಂಬಂಧ ಇಲ್ಲ. ಅದೇ ಹೆಸರಿನಿಂದಲೇ ನಾನು ಎರಡು ಬಾರಿ ಗೆದ್ದಿದ್ದೇನೆ. ಮೈಸೂರೇ ಗೊತ್ತಿಲ್ಲದ ನನ್ನನ್ನು ಮೊದಲ ಬಾರಿ ಮೈಸೂರಿನ ಜನ ಗೆಲ್ಲಿಸಿದ್ದಾರೆ. ಹೀಗಾಗಿ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ ಎಂದರು. ಇದನ್ನೂ ಓದಿ: ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು – ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು

ಅದು ಸಂಖ್ಯ ಶಾಸ್ತ್ರ ಎಂದೆನಲ್ಲ. ನೀವು ಸಂಖ್ಯೆ ಶಾಸ್ತ್ರ ಅಂದರೆ ಅದು ಸಂಖ್ಯೆ ಶಾಸ್ತ್ರ ಅಷ್ಟೇ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಅದು ಸಮಸ್ಯೆಯಾಗುತಿತ್ತು ಎಂದು ಹೇಳಿದರು.

Prathap Simha ಎಂಬ ಹೆಸರನ್ನು Pratap Simmha ಎಂದು ಬದಲು ಮಾಡಿಕೊಂಡಿರುವುದಾಗಿ ಅಫಿಡವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹಗಿಂತಲೂ ಮೊದಲೇ ಹಲವು ನಾಯಕರು ಇದೇ ಮಾದರಿಯ ಬದಲಾವಣೆ ಮಾಡಿಕೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಇಂಗ್ಲಿಷ್‌ನಲ್ಲಿ ಈ ಹಿಂದೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು.

ಬಿಜೆಪಿ ಪರಿಷತ್‌ ಸದಸ್ಯ ಹೆಚ್. ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು. ತಮಿಳುನಾಡು ಸಿಎಂ ಆಗಿದ್ದ ಜೆ. ಜಯಲಲಿತಾ ಅವರು ಕೂಡ ಇದೇ ರೀತಿ ತಮ್ಮ ಹೆಸರು ಬದಲಿಸಿಕೊಂಡಿದ್ದರು.

Share This Article