ಅಪಘಾತವಾಗಿ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಜೀವ ನೀಡಿದ ವೈದ್ಯ

Public TV
1 Min Read
DAVANAGERE BIKE ACCIDENT

ದಾವಣಗೆರೆ: ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಸವಾರನೊಬ್ಬನಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಭಾರೀ ಅನಾಹುತದಿಂದ ಪಾರು ಮಾಡಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಕ್ರಾಸ್ ಬಳಿ ಬೈಕ್ ಸವಾರ ಆಯತಪ್ಪಿ ಬಿದ್ದಿದ್ದ. ಪರಿಣಾಮ ಗಾಯಗೊಂಡು ಪ್ರಜ್ಞೆ ತಪ್ಪಿದ್ದ. ಬಿದ್ದ ಗಾಬರಿಗೆ ಆತನಿಗೆ ಬಿಪಿ ಏರುಪೇರಾಗಿ ಉಸಿರಾಟದ ತೊಂದರೆಯಾಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ದಾವಣಗೆರೆ ವೈದ್ಯ ಡಾ. ರವಿಕುಮಾರ್ ಅವರು ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಬಳಿಕ ಕೂಡಲೇ ಬೇರೆ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ರವಾನೆ ಮಾಡುವ ಮೂಲಕ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ವೈದ್ಯರ ಕರ್ತವ್ಯ ನಿಷ್ಠೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ಗೃಹಿಣಿ ಅನುಮಾನಸ್ಪದ ಸಾವು- ಪತಿ ವಿರುದ್ಧ ಆರೋಪ

Share This Article