ಅಮರ್‌ ರಹೇ ಕ್ಯಾಪ್ಟನ್‌ ಪ್ರಾಂಜಲ್‌ – ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಆಗಮನ

Public TV
1 Min Read
pranjal tribute

ಬೆಂಗಳೂರು: ಜಮ್ಮು-ಕಾಶ್ಮೀರ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್‌ ಪ್ರಾಂಜಲ್‌ (Captain Pranjal) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ವೀರ ಮರಣವನ್ನಪ್ಪಿದ ಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್‌ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ‌‌ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇದನ್ನೂ ಓದಿ: ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

pranjal tribute 1

ನಿಜಕ್ಕೂ ಇಂತಹ ದಿನ ಬರುತ್ತೆ ಅಂತಾ ಊಹೆ ಮಾಡಿರಲಿಲ್ಲ. ನಿಜಕ್ಕೂ ಬಹಳ ನೋವಾಗ್ತಿದೆ‌. ವೀರ ಯೋಧನನ್ನ ಕಳೆದುಕೊಂಡು ನಾಡು ತಬ್ಬಲಿಯಾಗಿದೆ. ದೇವರು ಕುಟುಂಬಕ್ಕೆ ಅವರ ಆಗಲಿಕೆ ನೋವು ಭರಿಸುವ ಶಕ್ತಿ ನೀಡಲಿ. ಅಂತಿಮ ದರ್ಶನದ ಮೂಲಕ ಗೌರವ ಸಮರ್ಪಣೆಗೆ ಬಂದಿದ್ದೇವೆ ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ.

ಅಂತಿಮ ದರ್ಶನ ಬಳಿಕ ಬೆಳಗ್ಗೆ 10 ಗಂಟೆಗೆ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ. ಜಿಗಣಿ ಓಟಿಸಿ ಸರ್ಕಲ್‌, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್‌ ರೋಡ್‌, ಕೋನಪ್ಪನ ಅಗ್ರಹಾರ ಸರ್ಕಲ್‌, ಕೂಡ್ಲುಗೇಟ್‌ ಮೂಲಕ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು. ಇದನ್ನೂ ಓದಿ: ಹುತಾತ್ಮ ಯೋಧನ ತಾಯಿಯ ರೋಧನೆ ನಡುವೆ ರಾಜಕಾರಣಿಗಳ ಫೋಟೋಶೂಟ್- ನೆಟ್ಟಿಗರಿಂದ ಕ್ಲಾಸ್

ಅಂತಿಮ ಯಾತ್ರೆ ಸಾಗಲಿರುವ 30 ಕಿ.ಮೀ ರಸ್ತೆಯುದ್ದಕ್ಕೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಕ್ಯಾಪ್ಟನ್‌ ಅಂತ್ಯಕ್ರಿಯೆ ನಡೆಯಲಿದೆ.

Share This Article