ಇನ್ಸ್ಟಾಗ್ರಾಂನಲ್ಲಿ 13 ಸಾವಿರ ಫಾಲೋವರ್ಸ್ ಕಳೆದುಕೊಂಡ ಸಂಗೀತಾ

Public TV
1 Min Read
sangeetha 4

‘777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಸೀಸನ್ 10 ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್‌ ಸ್ಪರ್ಧಿಯಾಗಿ ಆಟ ಆಡ್ತಿದ್ದಾರೆ. ಆದರೆ ಇದೀಗ ಸಂಗೀತಾ ಆಟ ಆಡ್ತಿರೋ ರೀತಿ ಬಿಗ್ ಬಾಸ್ ಮನೆ ಹೊರಗೆ ಭಾರೀ ಪರಿಣಾಮವನ್ನೇ ಬೀರಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ 13 ಸಾವಿರ ಫಾಲೋವರ್ಸ್ ಅನ್ನು ನಟಿ ಕಳೆದುಕೊಂಡಿದ್ದಾರೆ.

sangeetha sringeri 1 3

ದೊಡ್ಮನೆಯಲ್ಲಿ (Bigg Boss Kannada 10) ನಟಿ ಸಂಗೀತಾ ವಿಲನ್ ಆಗಿ ಈಗೀಗ ಹೈಲೆಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನ ಸಂಗೀತಾ ಮೇಲೆ ಇದ್ದಂತಹ ಅಭಿಪ್ರಾಯ ಈಗ ಬದಲಾಗಿದೆ. ಮೊನ್ನೆ ಟಾಸ್ಕ್‌ ಚಾಲೆಂಜ್‌ನಲ್ಲಿ ಸಂಗೀತಾ ಮಾತಿನಂತೆ ಕಾರ್ತಿಕ್- ತುಕಾಲಿ ಸಂತೂ ತಲೆ ಬೊಳಿಸಿದ ಮೇಲೆ ನಟಿ ವಿರುದ್ಧ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:‘ಸೂಟ್’ ಮೂಲಕ ಸಿನಿಮಾ ಕಥೆ ಹೇಳಲಿದ್ದಾರೆ ನಿರ್ದೇಶಕ ಭಗತ್ ರಾಜ್

Sangeetha Sringeri 3

ಈ ಘಟನೆ ಮತ್ತು ಸಂಗೀತಾ ನಡೆ ನುಡಿ ಎಲ್ಲವೂ ಬದಲಾಗಿರೋದರಿಂದ ಕಾರ್ತಿಕ್ ಮಹೇಶ್ (Karthik Mahesh) ಅಭಿಮಾನಿಗಳು ಸಂಗೀತಾ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಯಾರೇ ಸೆಲೆಬ್ರಿಟಿ ಬಿಗ್ ಬಾಸ್ ಮನೆಗೆ ಕಾಲಿಟ್ಟರೇ ಅವರ ಖ್ಯಾತಿ ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿ ಆಗುತ್ತಾರೆ. ಆದರೆ ಸಂಗೀತಾ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗಿದೆ.

ಕಾರ್ತಿಕ್ ಮತ್ತು ತುಕಾಲಿ ಸಂತೂಗೆ ತಲೆ ಬೊಳಿಸುವ ಟಾಸ್ಕ್ ಕೊಡುವ ಮುನ್ನ ಸಂಗೀತಾ 4.49 ಲಕ್ಷ ಹಿಂಬಾಲಕರು ಇದ್ದರು. ಶೇವಿಂಗ್ ಘಟನೆ ಬಳಿಕ ಇನ್ಸ್ಟಾಗ್ರಾಂನಲ್ಲಿ 4.36 ಲಕ್ಷಕ್ಕೆ ಹಿಂಬಾಲಕರು ಇಳಿಕೆ ಆಗಿದೆ. ಅಂದರೆ 13 ಸಾವಿರ ಫಾಲೋವರ್ಸ್‌ ಕಳೆದುಕೊಂಡಿದ್ದಾರೆ.

Share This Article