ರಾಜಕೀಯದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ – ನಾನು ರಾಜಕೀಯಕ್ಕೆ ಬರಲ್ಲ: ಅಭಿಷೇಕ್

Public TV
1 Min Read
Abishek Ambareesh

ಹುಬ್ಬಳ್ಳಿ: ಸಿನಿಮಾ (Cinema) ಅಂದ್ರೆ ದುಡ್ಡು ಕೊಟ್ಟು ಜನ ನಮ್ಮನ್ನ ನೋಡಲು ಬರ್ತಾರೆ. ಆದ್ರೆ ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನ ಕರಿಬೇಕು. ಹಾಗಾಗಿ ನಾನು ಯಾವ್ದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ (Abishek Ambareesh) ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು (Hubballi) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಅಂಬರೀಶಣ್ಣ (Ambareesh) 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಳಚೆ ಪ್ರದೇಶದಲ್ಲಿ ಮುಕ್ಕಾಲು ಕೆಜಿ ಚಿನ್ನ ಬಚ್ಚಿಟ್ಟಿದ್ದ ಖದೀಮ – 18 ಅರೆಸ್ಟ್ ವಾರೆಂಟ್ ಇದ್ದ ಸೆಲೆಬ್ರಿಟಿ ಮನೆಗಳ್ಳನ ಬಂಧನ

ಮಕ್ಕಳ ಹಸ್ತಕ್ಷೇಪ ಸರಿಯಲ್ಲ: ನಮ್ಮ ತಾಯಿಯವರು ತಾವು ಇರೋವರೆಗೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ನಾನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ. ಸೇವೆ ಮಾಡುವಂತಹ ಕೆಲಸಗಳಿದ್ದರೆ, ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ಕಾವೇರಿ ಹೋರಾಟದಲ್ಲಿ ಅಭಿಷೇಕ್‌ ಪಾಲ್ಗೊಂಡು ರೈತರಿಗೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ರಾಜಕೀಯ ದೃಷ್ಟಿಯಿಂದ ಕಾವೇರಿ ಹೋರಾಟಕ್ಕೆ ಬಂದಿಲ್ಲ: ನಟ ಅಭಿಷೇಕ್ ಸ್ಪಷ್ಟನೆ

Share This Article