Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಡಿಸೆಂಬರ್ 9ಕ್ಕೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗುತ್ತದೆ: ಸಿಎಂ ಇಬ್ರಾಹಿಂ

Public TV
Last updated: November 20, 2023 4:35 pm
Public TV
Share
4 Min Read
CM Ibrahim
SHARE

ಬೆಂಗಳೂರು: ನನ್ನನ್ನು ಅಮಾನತು ಮಾಡಿರೋ ಪಕ್ಷದ ನಿರ್ಧಾರವೇ ಕಾನೂನು ಬಾಹಿರ ಎಂದು ಮತ್ತೆ ದೇವೇಗೌಡ (HD Deve Gowda) ಹಾಗೂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.

ಅಮಾನತು ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಪ್ರಧಾನಿ ಆಗಿದ್ದರು. 70 ವರ್ಷ ರಾಜಕೀಯದಲ್ಲಿ ಇರೋರು. ದೇವೇಗೌಡರು ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದಿದ್ದೇ ತಪ್ಪು. ನನ್ನನ್ನು ತೆಗೆಯಬೇಕಾದ್ರೆ ಸಭೆ ಮಾಡಿ 2/3 ಮೆಜಾರಿಟಿಯಲ್ಲಿ ತೆಗೆಯಬೇಕು. ಇಲ್ಲದೆ ಹೋದ್ರೆ ಅವಧಿ ಮುಗಿಯಬೇಕು. ಇಲ್ಲ ನಾನು ಸಾಯಬೇಕು ಎಂದು ಹೇಳಿದರು.

CM Ibrahim 1

ಕೇರಳದಲ್ಲಿ ಮೀಟಿಂಗ್ ಕರೆದಿದ್ದು ನಾನು ಅಲ್ಲ. ರಾಷ್ಟ್ರೀಯ ಉಪಾಧ್ಯಕ್ಷ ಸಿಕೆ ನಾನು ಕರೆದಿದ್ದರು. 12 ರಾಜ್ಯದ ಜಿಲ್ಲಾ ಅಧ್ಯಕ್ಷರು ಆ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮಗನ ಮಾತು ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ಕೊಡೋಣ ಅಂತ ತೀರ್ಮಾನ ಆಗಿದೆ ಎಂದರು.

ಕುಮಾರಸ್ವಾಮಿ ಏಕಾಏಕಿಯಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 9 ರವರೆಗೂ ಅವಕಾಶ ಕೊಡಲಾಗಿದೆ. ಡಿಸೆಂಬರ್ 9ರ ಒಳಗೆ ನಿರ್ಧಾರ ವಾಪಸ್ ಮಾಡದೇ ಹೋದರೆ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ. ನಾನೇನು ಈ ಸಭೆ ಮಾಡಿಲ್ಲ. ಉಪಾಧ್ಯಕ್ಷರು ಕರೆದಿದ್ದರು ಅದಕ್ಕೆ ಹೋದೆ. ದೇವೇಗೌಡರು ಇಂತಹ ಒಂದು ಸಭೆ ಮಾಡಿಲ್ಲ. ಜಿಟಿ ದೇವೇಗೌಡ ಸಭೆ ಮಾಡಿದ್ರು. ಅವರ ಹತ್ರ ಮಾತಾಡಿಸ್ತಾರೆ ಅಷ್ಟೇ. ಇದು ಫ್ಯಾಮಿಲಿ ಆಂಡ್ ಕೋರ್ಟ್ ತರಹ ಆಗಲ್ಲ. ಇಷ್ಟು ದಿನ ಹಾಗಿತ್ತು. ಈಗ ಅದು ಆಗಲ್ಲ. ನನ್ನ ತೆಗೆದಿದ್ದೇ ತಪ್ಪು ಅಂತ ಕೋರ್ಟ್‌ಗೆ ಹೋಗ್ತೀನಿ. ಬಿಜೆಪಿ ಜೊತೆ ಹೋಗಿ ಕುಮಾರಸ್ವಾಮಿ ಮಾತಾಡಿದ್ರು. ಅವರ ಮೇಲೆ ದೇವೇಗೌಡ ಅಮಾನತು ಮಾಡಬೇಕು. ಅದು ಬಿಟ್ಟು ನನ್ನನ್ನು ಅಮಾನತು ಮಾಡಿದ್ದೇ ನಿಯಮಬಾಹಿರ ಎಂದು ಕಿಡಿಕಾರಿದರು.

CM Ibrahim

ನಾನು ಎಂಎಲ್‌ಎ ಸ್ಥಾನ ಬಿಟ್ಟು ಬಂದೆ. ಹೀಗೆ ಮಾಡಿದ್ದು ಸರಿನಾ ದೇವೇಗೌಡರೇ? ನಿಮ್ಮ ಮಗನಿಗಾಗಿ ಎಷ್ಟು ಜನರನ್ನು ಬಲಿ ಕೊಡಬೇಕು ಅಂತ ಇದ್ದೀರಾ? ನಿಮ್ಮ ಸಿದ್ದಾಂತಕ್ಕೆ ನೀವು ವಾಪಸ್ ಬನ್ನಿ. ದಸರಾ ಆಯ್ತು ಅಮಿತ್ ಶಾ ಕರೆದರಾ? ವಿಜಯೇಂದ್ರ, ಅಶೋಕ್ ಅಧ್ಯಕ್ಷ, ವಿಪಕ್ಷ ಸ್ಥಾನ ಮಾಡಿದ್ರು. ಅವರ ಮುಂದೆ ಹೋಗಿ ಕುಮಾರಸ್ವಾಮಿ ನಿಲ್ತೀರಾ? 2 ಸೀಟಿಗೋಸ್ಕರ ಅಮಿತ್ ಶಾ ಮುಂದೆ ದೇವೇಗೌಡ ಹೋಗಿ ನಿಂತುಕೊಳ್ಳೋದಾ? ಜೆಡಿಎಸ್ ಅವರು ಮೈಮೇಲೆ ಬಿದ್ದು ಬಿಜೆಪಿ ಜೊತೆ ಹೋಗ್ತಿದ್ದಾರೆ. ತೆನೆ ಹೊತ್ತ ಮಹಿಳೆಯನ್ನು ಯಾರ ಯಾರ ಹತ್ತಿರ ಕರೆದುಕೊಂಡು ಹೋಗ್ತೀರಾ? ಕಾಂಗ್ರೆಸ್ ಆಯ್ತು, ಬಿಜೆಪಿ ಆಯ್ತು ಇನ್ನು ಯಾರ ಜೊತೆ ಕಳಿಸ್ತೀರಾ ಎಂದು ಕಿಡಿಕಾರಿದರು.

ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಂ ಮತ ಪಡೆದು ಗೆದ್ರಲ್ಲ ಅದು ಯಾರ ಮುಖ ನೋಡಿ ಬಂತು. ಇದು ಸಂತೆ ವ್ಯಾಪಾರನಾ ದೇವೇಗೌಡರೇ? ಚಂದ್ರಶೇಖರ್ ರಾವ್ ಜೊತೆ ಹೋದ್ರಿ ಅವರನ್ನು ಬಿಟ್ರಿ. ಯಾರನ್ನಾದ್ರು ಒಬ್ಬರನ್ನು ಇಟ್ಕೊಳ್ಳಿ. ಕುಮಾರಸ್ವಾಮಿ ಶಿವಕುಮಾರ್‌ಗೆ ಸಿಎಂ ಆದ್ರೆ ಬೆಂಬಲ ಕೊಡ್ತೀನಿ ಅಂತೀರಾ. ಯಾರು ನಿಮಗೆ ಅಧಿಕಾರ ಕೊಟ್ಟಿದ್ದು? 19 ಜನ ಶಾಸಕರನ್ನು ಕೇಳಿದ್ರಾ? ಇದು ಕಂಪನಿನಾ? ರಾಜಕೀಯ ಪಕ್ಷನಾ? ಡಿಕೆಶಿ ನಿಮಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಅಂತ ಲೇವಡಿ ಮಾಡಿದರು.

CM IBRAHIM HD KUMARASWAMY

19 ಜನ ಎಂಎಲ್‌ಎ ನಿಮ್ಮ ಜೊತೆ ನಿಲ್ಲೋದಿಲ್ಲ. ಡಿಸೆಂಬರ್ 9ರ ನಂತರ ಎಲ್ಲವೂ ಗೊತ್ತಾಗಲಿದೆ. ಮೋದಿಗೆ, ಅಮಿತ್ ಶಾಗೆ ವ್ಯಕ್ತಿಗತ ವಿರೋಧ ಇಲ್ಲ. ಸಿದ್ದಾಂತದ ಬಗ್ಗೆ ನಮ್ಮ ವಿರೋಧ ಇದೆ. ಡಿಸೆಂಬರ್ 9 ರಂದು ಸಭೆ ಆಗಲಿದೆ. ಅಲ್ಲಿ ಅಂತಿಮ ತೀರ್ಮಾನ ಮಾಡ್ತೀವಿ. ಶಾಸಕರ ಜೊತೆಗೂ ಮಾತಾಡ್ತಿದ್ದೇನೆ. ಅಮಾನತು ನಾನು ಒಪ್ಪಲ್ಲ. ತಾಳಿ ಕಟ್ಟಿರೋ ಹೆಂಡ್ತಿ ಅಲ್ಲ ನಾನು ಹೋಗು ಅಂತ ಹೋಗೋಕೆ. ಅವರಿಗೆ ಅಮಾನತು ಮಾಡೋಕೆ ಅಧಿಕಾರ ಇಲ್ಲ. ಭೋಜೇಗೌಡ ಏನ್ ರಿಪೋರ್ಟ್ ಕೊಟ್ರು? ಅವರು ಯಾರು ರಿಪೋರ್ಟ್ ಕೊಡೋಕೆ? ಕಾಂಗ್ರೆಸ್‌ಗೆ ವೋಟ್ ಹಾಕಿ ಅಂದವರು ಭೋಜೇಗೌಡ ಅವರು ಏನು ವರದಿ ಕೊಡೋದು? ಡಿಸೆಂಬರ್ 9 ರಂದು ದೇವೇಗೌಡರು ಒಪ್ಪದೇ ಹೋದ್ರೆ ಹೊಸ ರಾಷ್ಟ್ರೀಯ ಅಧ್ಯಕ್ಷ ಮಾಡ್ತೀವಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಹೆಚ್‍ಡಿಕೆ ಸ್ವಾಮಿಯೇ ಅಯ್ಯಪ್ಪ ಅಂತಿಲ್ಲ, ಅಮಿತ್ ಅಯ್ಯಪ್ಪ ಅಂತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ

ಜೆಡಿಎಸ್‌ನಲ್ಲಿ ನನ್ನ ರಾಜ್ಯಾಧ್ಯಕ್ಷ ಚುನಾವಣೆ ಮಾತ್ರ ಸರಿಯಾಗಿ ನಡೆದಿದೆ. ಇನ್ಯಾವುದೇ ಚುನಾವಣೆ ಜೆಡಿಎಸ್‌ನಲ್ಲಿ ಸರಿಯಾಗಿ ನಡೆದಿಲ್ಲ. ಚುನಾವಣೆ ಆಯೋಗಕ್ಕೆ ಇವರು ವಿವರ ಕೊಟ್ಟೇ ಇಲ್ಲ. ಯಾವುದೇ ರಾಜ್ಯದಲ್ಲಿ ಇವರಿಗೆ ಬೆಂಬಲ ಇಲ್ಲ. ಇದೇನು ಬಸ್ರಾಳು ಸಂತೆನಾ? ಇದು ರಾಜಕೀಯ. ನಾನು ರೆಬೆಲ್ ಆಗಿಲ್ಲ. ರೆಬೆಲ್ ಆಗಿದ್ದು ಕುಮಾರಸ್ವಾಮಿ, ದೇವೇಗೌಡ. ಏಕಾಏಕಿ ಮೈತ್ರಿ ಅಂತ ಹೋದ್ರೆ ಹೇಗೆ? ಯಾರ್ ಮಾತು ಕೇಳಬೇಕು ನಾವು? ಪಾರ್ಟಿ ಅಧ್ಯಕ್ಷ ಮಾತು ಕೇಳಬೇಕಾ? ಕುಮಾರಸ್ವಾಮಿ, ದೇವೇಗೌಡ ಮಾತು ಕೇಳಬೇಕು. ಇದೇನು ಕಾಟನ್ ಪೇಟೆ, ಚಿಕ್ಕಪೇಟೆ ವ್ಯಾಪಾರ ಅಲ್ಲ ಎಂದು ಕುಮಾರಸ್ವಾಮಿ, ದೇವೇಗೌಡ ವಿರುದ್ಧ ಇಬ್ರಾಹಿಂ ಕಿಡಿಕಾರಿದರು.

ಇಬ್ರಾಹಿಂ ಕಾಂಗ್ರೆಸ್‌ನವರು ಹೇಳಿದ್ದಕ್ಕೆ ಹೀಗೆ ಮಾತಾಡ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅಂತ ಕಾಂಗ್ರೆಸ್‌ನ ಎಂಎಲ್‌ಎ ಸ್ಥಾನ ಬಿಟ್ಟು ಬಂದಿದ್ದೇನೆ. ಮತ್ತೆ ಹೋಗಲ್ಲ ಅಂತ ಹೇಳಲ್ಲ. ಇವರೇ ಬಿಜೆಪಿ ಜೊತೆ ಹೋಗಿದ್ದಾರೆ. ಮುಂದೆ ಏನಾಗುತ್ತೆ ಗೊತ್ತು. ಶರದ್ ಪವಾರ್, ನಿತೀಶ್ ಕುಮಾರ್, ಸೇರಿ ಎಲ್ಲರು ನನ್ನ ಜೊತೆ ಮಾತಾಡಿದ್ದಾರೆ. ಮೂರನೇ ಶಕ್ತಿಯೊಂದಕ್ಕೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಜೊತೆ ಯಾವುದೇ ಮಾತುಕತೆ ಆಗಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸ್ನೇಹಿತರು ಇದ್ದಾರೆ. ಡಿಕೆಶಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕುಮಾರಸ್ವಾಮಿಗೆ ಒಳ್ಳೆ ಉತ್ತರ ಕೊಟ್ಟಿದ್ದಾರೆ. ನಾನು ಯಾವತ್ತು ಡಿಕೆಶಿ ವಿರುದ್ಧ ಮಾತಾಡಿಲ್ಲ ಅಂತ ಡಿಕೆಶಿ ಪರ ಬ್ಯಾಟಿಂಗ್ ಮಾಡಿ ಕುಮಾರಸ್ವಾಮಿಯನ್ನು ತೆಗಳಿದರು. ಇದನ್ನೂ ಓದಿ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮುರುಘಾ ಶ್ರೀ ಮತ್ತೆ ಅರೆಸ್ಟ್

TAGGED:CM ibrahimHD Deve Gowdahd kumaraswamyjdsಜೆಡಿಎಸ್ಸಿಎಂ ಇಬ್ರಾಹಿಂಹೆಚ್‍ಡಿ ಕುಮಾರಸ್ವಾಮಿಹೆಚ್‍ಡಿ ದೇವೇಗೌಡ
Share This Article
Facebook Whatsapp Whatsapp Telegram

Cinema News

Actor Jaggesh at mantralaya 1
ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ
Cinema Districts Latest Raichur Sandalwood Top Stories
rana daggubati
ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ
Cinema Latest Top Stories
Dhruva Sarja Raghavendra Hegde
ಧ್ರುವ ಬಳಗದ ಆರೋಪಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಸ್ಪಷ್ಟನೆ
Cinema Latest Sandalwood Top Stories
darshan 28 years cinema journey
ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ
Cinema Latest Sandalwood Top Stories
Shoba Karandlaje
ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ
Bengaluru City Cinema Karnataka Latest Sandalwood States Top Stories

You Might Also Like

misappropriation of more than rs 2 crore from pmay housing scheme in hassan case registered
Crime

ಹಾಸನ | 2 ಕೋಟಿಗೂ ಹೆಚ್ಚಿನ ಅನುದಾನ ದುರುಪಯೋಗ – ನೋಡಲ್ ಅಧಿಕಾರಿ ವಿರುದ್ಧ ಕೇಸ್‌ ದಾಖಲು

Public TV
By Public TV
3 minutes ago
KN Rajanna
Bengaluru City

ಸೆಪ್ಟೆಂಬರ್‌ ಕ್ರಾಂತಿ ಎಂದಿದ್ದ ರಾಜಣ್ಣಗೆ ಆಗಸ್ಟ್‌ನಲ್ಲೇ ಕೇಡುಗಾಲ – ವಜಾಗೆ ಕಾರಣ ಏನು?

Public TV
By Public TV
11 minutes ago
KN Rajanna Siddaramaiah
Bengaluru City

ಸಂಪುಟದಿಂದ ರಾಜಣ್ಣ ಕಿಕ್‌ಔಟ್‌ – ಆಪ್ತನ ತಲೆದಂಡದಿಂದ ಮೌನಕ್ಕೆ ಶರಣಾದ ಸಿಎಂ

Public TV
By Public TV
12 minutes ago
Ranganath
Bengaluru City

ರಾಜಣ್ಣ ವಜಾ ಬೆನ್ನಲ್ಲೇ ಹೊಸ ಬಾಂಬ್‌ ಸಿಡಿಸಿದ ಕುಣಿಗಲ್‌ ರಂಗನಾಥ್‌

Public TV
By Public TV
24 minutes ago
KN Rajanna
Bengaluru City

ಸಚಿವ ಸ್ಥಾನಕ್ಕೆ ಕೆಎನ್‌ ರಾಜಣ್ಣ ರಾಜೀನಾಮೆ

Public TV
By Public TV
43 minutes ago
Mantralayam Mutt Fire Accident
Districts

ಮಂತ್ರಾಲಯ ಮಠದ ಗೋಶಾಲೆಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ರೂ. ಮೌಲ್ಯದ ಮೇವು ಭಸ್ಮ

Public TV
By Public TV
47 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?