ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

Public TV
1 Min Read
Mohammed Shami Narendra Modi

ಅಹಮದಾಬಾದ್‌: ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ (World Cup Cricket) ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ (Team India) ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಡ್ರೆಸ್ಸಿಂಗ್‌ ರೂಮ್‌ಗೆ (Dressing Room) ತೆರಳಿ ಆಟಗಾರರಿಗೆ ಸಮಾಧಾನ ಹೇಳಿದ್ದಾರೆ.

ಪ್ರಧಾನಿ ಡ್ರೆಸ್ಸಿಂಗ್‌ ರೂಮ್‌ಗೆ ಬಂದ ವಿಚಾರವನ್ನು ಬೌಲರ್‌ ಮೊಹಮ್ಮದ್‌ ಶಮಿ (Mohammed Shami) ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.  ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

Ravindra Jadeja Narendra Modi

ಶಮಿಯನ್ನು ಅಪ್ಪಿದ ಮೋದಿ ಸಮಾಧಾನ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಶಮಿ, ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮದಾಗಿರಲಿಲ್ಲ. ಪಂದ್ಯಾವಳಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಮತ್ತೆ ಪುಟಿದೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ನಾವು ಉತ್ತಮವಾಗಿ ಆಡಿದ್ದರೂ ನಿನ್ನೆ ನಾವು ಮುಗ್ಗರಿಸಿದ್ದೇವೆ. ಜನರು ಈಗಲೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಮ್ಮ ಡ್ರೆಸ್ಸಿಂಗ್‌ ರೂಮ್‌ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು ಎಂದು ಜಡೇಜಾ ಬರೆದಿದ್ದಾರೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಪಡೆದ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಟ್ರಾವಿಸ್‌ ಹೆಡ್‌ ಶತಕ ಮತ್ತು ಲಬುಶೇನ್‌ ಅವರ ಸಮಯೋಚಿತ ಅರ್ಧಶತಕದಿಂದ ಇನ್ನೂ 42 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು 241 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ಗೆ ಮುತ್ತಿಕ್ಕಿತು.

Share This Article