ಬಿಗ್ ಬಾಸ್ ಮನಯೆಲ್ಲಿ ನಟಿ ತನಿಷಾ ಕುಪ್ಪಂಡ (Tanisha Kuppanda) ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದ್ದಂತೆ ನಿನ್ನೆ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಬಿಗ್ ಬಾಸ್ ಆಡಳಿತ ಮಂಡಳಿಗೂ ಪೊಲೀಸರು ನೋಟಿಸ್ ನೀಡಿದ್ದು, ಪ್ರೊಮೋದ ಓರಿಜನಲ್ ಫುಟೇಜ್ ಕೊಡಲು ಸೂಚಿಸಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವಿಡಿಯೋವನ್ನು ಇಂದು ಪೊಲೀಸರು ಸಂಜೆ ಎಫ್.ಎಸ್.ಎಲ್ ಗೆ ಕಳುಹಿಸುವ ಸಾಧ್ಯತೆ ಇದ್ದು, ವರದಿ ಬಂದ ನಂತರ ತನಿಷಾ ಅವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಲಿದ್ದಾರೆ.
- Advertisement
- Advertisement
ಏನಿದು ಪ್ರಕರಣ?
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ತನಿಷಾ ಕುಪ್ಪಂಡ ಅವರ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್ 12 ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿದೆ.
ಡ್ರೋನ್ ಪ್ರತಾಪ್‌ಗೆ ಮಾತನಾಡುವ ಭರದಲ್ಲಿ ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಎಸ್‌ಸಿಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ನಂತರ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜೈಲು ಸೇರುತ್ತಾರಾ? ಕಾಯಬೇಕಿದೆ.