ಮೈಸೂರು: ಕ್ಷೇತ್ರದಲ್ಲಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ (Siddaramaiah)ವರ್ಸಸ್ ಜಿ.ಟಿ ದೇವೇಗೌಡರ (G.T Devegowda) ಸಮರ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಜಿಟಿಡಿ ತೊಡೆ ತಟ್ಟಿ ನಿಂತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ (Cooperative Bank) ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ತಂತ್ರವನ್ನು ಉಲ್ಟಾ ಮಾಡುವುದಾಗಿ ಜಿಟಿಡಿ ಸವಾಲು ಹಾಕಿದ್ದಾರೆ.
ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಎಂಡಿಸಿಸಿ ಬ್ಯಾಂಕ್ ಚುನಾವಣೆ ಈಗ ದಿಢೀರ್ ಮುಂದೂಡಲಾಗಿದೆ. ಚುನಾವಣೆ ಘೋಷಣೆ ಮಾಡಿದ್ದ ಜಿಲ್ಲಾಧಿಕಾರಿಗಳು ದಿಢೀರ್ ಆದೇಶ ಹಿಂತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ
ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿ ಗೆದ್ದಿದ್ದ ಜಿಟಿಡಿ, ಈಗ ಮೈಸೂರು ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಸಿಎಂ ವಿರುದ್ಧ ಸಮರ ಆರಂಭಿಸಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದಾಗಲು ಇದೆ ರೀತಿ ಪ್ಲಾನ್ ಮಾಡಿದ್ದರು. ಆಗಲೂ ಅದು ಯಶಸ್ವಿಯಾಗಿರಲಿಲ್ಲ. ಈಗ ಸಿಎಂ ಮಾಡಿರುವ ಪ್ಲಾನ್‍ನ್ನು ಸವಾಲಾಗಿ ಸ್ವೀಕರಿಸಿರುವ ಅವರು ಈ ಬಾರಿಯ ಸಹಕಾರ ಕ್ಷೇತ್ರದಲ್ಲಿ ಗೆಲ್ಲುವ ಶಪಥ ಮಾಡಿದ್ದಾರೆ.
ಈ ಬಾರಿಯು ಆರು ತಿಂಗಳು ಕಾಲ ಚುನಾವಣೆ ಮುಂದೂಡಲು ಸಿಎಂ ಪ್ಲಾನ್ ಮಾಡಿದ್ದಾರೆ. ಸಹಕಾರಿಗಳು ನಮ್ಮ ಜೊತೆ ಇದ್ದಾರೆ. ಎಷ್ಟೇ ದಿನದ ನಂತರ ಚುನಾವಣೆ ನಡೆದರೂ ಈ ಕ್ಷೇತ್ರದಲ್ಲಿ ನಾನು ಪಾರುಪಥ್ಯ ಸಾಧಿಸುತ್ತೇನೆ ಎಂದು ಜಿಟಿಡಿ ಹೇಳಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ