ಶರ್ಮಿಳಾ ಮಾಂಡ್ರೆ ಸಾರಥ್ಯದಲ್ಲಿ ನಿರ್ಮಾಣವಾಯ್ತು ತಮಿಳು ಚಿತ್ರ

Public TV
1 Min Read
sharmiela mandre

‘ಸಜನಿ’ (Sajani) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ ಇದೀಗ ತಮಿಳು ಸಿನಿಮಾವೊಂದಕ್ಕೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಕನ್ನಡದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ಶರ್ಮಿಳಾ ಸಾಥ್ ನೀಡಿದ್ದಾರೆ.

sharmiela mandre

ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ (Sharmiela Mandre) ಹೊತ್ತಿದ್ದಾರೆ. ಕನ್ನಡದ ‘ಮುಂದಿನ ನಿಲ್ದಾಣ’ ಚಿತ್ರ ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ತಮಿಳಿನ ‘ಸಿಲ್ ನೋಡಿಗಳಿಲ್’ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ:‘ಸಲಾರ್’ ಚಿತ್ರದ ಹಾಟ್ ಹಾಡಿಗೆ ಕುಣಿದ ಸಿಮ್ರನ್ ಕೌರ್

sharmiela mandre 1

ಲಂಡನ್‌ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. ‘ಸಿಲ್ ನೋಡಿಗಳಿಲ್’ ಎಂದರೆ ಕೆಲವೇ ಕ್ಷಣಗಳಲ್ಲಿ ಎಂದು ಅರ್ಥ.

ಸದ್ಯ ತಮಿಳಿನಲ್ಲಿ ಈ ಚಿತ್ರ ನವೆಂಬರ್ 24ರಂದು ರಿಲೀಸ್ ಆಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿ ನಿರ್ಮಿಸುವ ಯೋಜನೆ ಇದೆ ಎಂದು ನಟಿ ಶರ್ಮಿಳಾ ತಿಳಿಸಿದ್ದಾರೆ.

Share This Article