ವರ್ಗಾವಣೆ ಕೋರಿ ಪತ್ರ ಬರೆದ ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ

Public TV
1 Min Read
cubbon park police station 1

ಬೆಂಗಳೂರು: ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ ಸಾಮೂಹಿಕ ವರ್ಗಾವಣೆ ಕೋರಿ ಮನವಿ ಮಾಡಿಕೊಂಡಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಬ್ಬನ್ ಪಾರ್ಕ್ (Cubbon Park Police) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 35 ಸಿಬ್ಬಂದಿ ವರ್ಗಾವಣೆ ಮೊರೆ ಹೋಗಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡಿಕೊಡುವಂತೆ ಸಾಮೂಹಿಕವಾಗಿ ಮನವಿ ಮಾಡಿಕೊಂಡಿರೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮೂಹಿಕ ವರ್ಗಾವಣೆ ಹಿಂದಿನ ಕಾರಣ ಠಾಣಾಧಿಕಾರಿಯ ಕಡೆ ಬೆರಳು ಮಾಡಲಾಗುತ್ತಿದೆ. ಇದನ್ನೂ ಓದಿ: ನಿದ್ದೆ ಬಿಟ್ಟು ಲೋಕಸಭೆಯ 28 ಸೀಟ್ ಗೆಲ್ಲಿಸಲು ರಾಜ್ಯಾದ್ಯಂತ ಓಡಾಡುವೆ: ಎಂ.ಪಿ.ರೇಣುಕಾಚಾರ್ಯ

deputy commissioner police

ವರ್ಗಾವಣೆಗೆ ಮನವಿ ಮಾಡಿರುವವರಲ್ಲಿ 12 ಮಂದಿ ಎಎಸ್‌ಐ, 23 ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳಿದ್ದಾರೆ. ಆಡಳಿತ ವಿಭಾಗಕ್ಕೆ ಎಲ್ಲರೂ ವೈಯಕ್ತಿಕ ಕಾರಣಗಳನ್ನ ನೀಡಿ ಮನವಿ ಮಾಡಿಕೊಂಡಿದ್ದಾರಾದರು ಕೂಡ ಇಲಾಖೆಯಲ್ಲಿ, ಠಾಣೆಯಲ್ಲಿ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ.

ಒಂದು ಠಾಣಾಧಿಕಾರಿಯ ಕೈ ಕೆಳಗಡೆ ಕೆಲಸ ಮಾಡೋದಕ್ಕೆ ಕಷ್ಟವಾಗುತ್ತಿರುವ ಕಾರಣದಿಂದ ಎಲ್ಲರೂ ಸಾಮೂಹಿಕವಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗಲು ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸಾಮ್ಯತೆ ಇಲ್ಲದೇ ಇರುವುದೇ ಸಾಮೂಹಿಕ ವರ್ಗಾವಣೆಗೆ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಗುಂಡ್ಲುಪೇಟೆಯ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ

ವರ್ಗಾವಣೆಗೆ ಮನವಿ ಮಾಡಿಕೊಂಡಿರುವ 35 ಸಿಬ್ಬಂದಿಯಲ್ಲಿ ಕೆಲವರು ವರ್ಗಾವಣೆ ಆಗಿದ್ದಾರೆ. ಉಳಿದ ಒಂದಷ್ಟು ಸಿಬ್ಬಂದಿ ಕೂಡ ವರ್ಗಾವಣೆ ಪತ್ರ ಕೈಯಲ್ಲಿ ಹಿಡಿದುಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ.

Share This Article