ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

Public TV
2 Min Read
ayodhya deepotsava 1

ಲಕ್ನೋ: ಅಯೋಧ್ಯೆಯ (Ayodhya) ಸರಯು ನದಿಯ ತಟದಲ್ಲಿ 22 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆಯಲಾಗಿದೆ. ಈ ಸ್ಮರಣೀಯ ಸಂದರ್ಭದ ಮರುದಿನವೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ದೀಪೋತ್ಸವದ (Deepotsava) ದಿನ ಕೆಲವು ಮಕ್ಕಳು ಘಾಟ್‌ನಲ್ಲಿ ದೀಪದಿಂದ ಎಣ್ಣೆಯನ್ನು ತೆಗೆದುಕೊಂಡು ಪಾತ್ರೆಗಳಲ್ಲಿ ತುಂಬುತ್ತಿರುವ ದೃಶ್ಯದ ವೀಡಿಯೋವನ್ನು ಅಖಿಲೇಶ್‌ ಯಾದವ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Ayodhya Deepotsav: ಶ್ರೀರಾಮ ಜನ್ಮಭೂಮಿಯಲ್ಲಿ ದೀಪೋತ್ಸವ – ಅಯೋಧ್ಯೆ ಬೆಳಗಿದ 24 ಲಕ್ಷ ಹಣತೆಗಳು

ದೈವಿಕತೆಯ ನಡುವೆ ಬಡತನ… ಬಡತನವು ದೀಪಗಳಿಂದ ಎಣ್ಣೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ಆಚರಣೆಯ ಬೆಳಕು ಮಂದವಾಗುತ್ತದೆ. ಘಟ್ಟ ಮಾತ್ರವಲ್ಲದೆ ಪ್ರತಿಯೊಬ್ಬ ಬಡವರ ಮನೆಯೂ ಬೆಳಗುವ ಇಂತಹ ಹಬ್ಬ ಬರಲಿ ಎಂಬುದು ನಮ್ಮ ಹಾರೈಕೆ ಎಂದು ಎಸ್‌ಪಿ ಮುಖ್ಯಸ್ಥ ಬರೆದುಕೊಂಡಿದ್ದಾರೆ.

7ನೇ ಆವೃತ್ತಿಯ ದೀಪೋತ್ಸವದಂದು ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ಬರೆಯಲಾಯಿತು. ಒಟ್ಟು 22.23 ಲಕ್ಷ ಮಣ್ಣಿನ ದೀಪಗಳು ಅಯೋಧ್ಯೆಯನ್ನು ಬೆಳಗಿದವು. ಕಳೆದ ವರ್ಷಕ್ಕಿಂತ 6.47 ಲಕ್ಷ ಹೆಚ್ಚು ಹಣತೆಗಳನ್ನು ಈ ಬಾರಿ ಹಚ್ಚಲಾಗಿತ್ತು. 25,000 ಸ್ವಯಂಸೇವಕರು ನದಿಯ ಉದ್ದಕ್ಕೂ ರಾಮ್ ಕಿ ಪೈಡಿಯ 51 ಘಾಟ್‌ಗಳಲ್ಲಿ ಬೆಳಗಿದರು. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರತಿನಿಧಿಗಳು ಡ್ರೋನ್‌ಗಳನ್ನು ಬಳಸಿ ದೀಪಗಳನ್ನು ಎಣಿಸಿ ಅದನ್ನು ವಿಶ್ವ ದಾಖಲೆಯಾಗಿ ನೋಂದಾಯಿಸಿದ ನಂತರ ಅಯೋಧ್ಯೆ ‘ಜೈ ಶ್ರೀರಾಮ್’ ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು.

Share This Article