ಕಿಡ್ನಿ ಸ್ಟೋನ್ ಎಂದರೇನು..?- ಈ ಸಮಸ್ಯೆಯಿಂದ ಪಾರಾಗುವುದು ಹೇಗೆ..?

Public TV
2 Min Read
kidney stone 1

ಸಾಮಾನ್ಯವಾಗಿ ಹೊಟ್ಟೆನೋವನ್ನು ಎಲ್ಲರೂ ಅನುಭವಿಸಿರುತ್ತಾರೆ. ಕೆಲವರಲ್ಲಿ ವಿಪರೀತವಾಗಿ ಹೊಟ್ಟೆನೋವು ಕಾಣಿಸಿಕೊಂಡು ಅವರು ವೈದ್ಯರ ಬಳಿ ಹೋಗುತ್ತಾರೆ. ವೈದ್ಯರು ಪರೀಕ್ಷೆ ನಡೆಸಿದಾಗ ಕೆಲವರಲ್ಲಿ ಕಿಡ್ನಿ ಸ್ಟೋನ್ (Kidney Stone) ಇರುವುದು ಬಯಲಾಗುತ್ತದೆ. ಕಿಡ್ನಿ ಮನುಷ್ಯನ ಬಹು ಮುಖ್ಯ ಅಂಗ. ಆದರೆ ಬದಲಾಗುತ್ತಿರುವ ಜೀವನಶೈಲಿ ನೀರನ್ನು ಕಡಿಮೆ ಕುಡಿಯುವುದು ಈ ಎಲ್ಲಾ ಕಾರಣಗಳಿಂದ ಕಿಡ್ನಿ ಕಲ್ಲಿನ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಣ್ಣ ಪ್ರಮಾಣದ ಕಿಡ್ನಿ ಸ್ಟೋನ್‍ಗಳಿದ್ದಾಗ ಮನೆಯಲ್ಲೇ ಆ ಸಮಸ್ಯೆ ನಿವಾರಿಸಿಕೊಳ್ಳುವುದು ಹೇಗೆ..?. ಕಿಡ್ನಿಸ್ಟೋನ್ ಅಂದ್ರೆ ಏನು..? ಚಿಕಿತ್ಸೆ ಹೇಗೆ ಎಂಬುದರ ಡೀಟೈಲ್ ವಿವರ ಇಲ್ಲಿದೆ.

ಕಿಡ್ನಿಸ್ಟೋನ್ ಎಂದರೇನು..?: ಕಿಡ್ನಿ ಕಲ್ಲುಗಳು ಎಂದರೆ ಹಲವಾರು ಬಗೆಯ ಖನಿಜಾಂಶಗಳು ಮತ್ತು ಲವಣಾಂಶಗಳು ಸೇರಿಕೊಂಡು ಮೂತ್ರ ಪಿಂಡಗಳಲ್ಲಿ ಘನಾಕಾರದ ವಸ್ತುಗಳ ರಚನೆ ಆಗುವುದು. ಇದರಲ್ಲಿ ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತೆ ಯೂರಿಕ್ ಆಸಿಡ್ ಅಂಶಗಳು ದಟ್ಟವಾಗಿರುತ್ತವೆ. ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗಲು ಕಾರಣವೆಂದರೆ ನಮ್ಮ ದೇಹದ ಕೆಲವು ಖನಿಜಾಂಶಗಳ ಅಧಿಕ ಪ್ರಮಾಣ ನಮ್ಮ ಮೂತ್ರದಲ್ಲಿ ಸೇರಿ ಹೋಗಿ ಕಲ್ಲುಗಳ ಉತ್ಪತ್ತಿಗೆ ಕಾರಣವಾಗುತ್ತದೆ.

DRINKING WATER

ಲಕ್ಷಣಗಳೇನು..?:
* ಬೆನ್ನು, ಸೊಂಟ, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ವಿಪರೀತ ನೋವು
* ಮೂತ್ರ ವಿಸರ್ಜನೆಯ ಸಮಯದಲ್ಲಿ ತೀವ್ರ ನೋವು
* ಕೆಂಪು, ಗುಲಾಬಿ ಅಥವಾ ಕಂದು ಬಣ್ಣದ ಮೂತ್ರ
* ಮೂತ್ರ ವಿಸರ್ಜನೆಗೆ ಮತ್ತೆ ಮತ್ತೆ ಹೋಗಬೇಕೆನಿಸುವುದು
* ವಾಕರಿಕೆ ಮತ್ತು ವಾಂತಿಯ ಸಮಸ್ಯೆ ತಲೆದೋರುವುದು

ಕಿಡ್ನಿ ಸ್ಟೋನ್ ತಡೆಯುವುದು ಹೇಗೆ..?: ಗಾಢ ಬಣ್ಣದ ಹಳದಿಯ ಮೂತ್ರವಿಸರ್ಜನೆ ದೇಹದ ನಿರ್ಜಲೀಕರಣದ ಸೂಚನೆಯಾಗಿರುತ್ತದೆ. ಹೀಗಾಗಿ ಪ್ರತಿನಿತ್ಯ 12 ಲೋಟ ನೀರು ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ನಿತ್ಯ ಇದೇ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಬಹುದು.

fresh lemon juice which can help with constipation

ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಅಂಶ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವದರಿಂದ ಕಿಡ್ನಿ ಸ್ಟೋನ್‍ನಿಂದ ತಪ್ಪಿಸಿಕೊಳ್ಳಬಹುದು. ಇನ್ನು ತುಳಸಿ ರಸ, ಸ್ಮೂತಿ, ಕಷಾಯ, ತುಳಸಿ ಟೀ ಸೇವನೆಯೊಂದಿಗೆ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಅತಿಯಾದ ಸೇವನೆ ಬೇಡ. ನಿಯಮಿತ ಸೇವನೆ ಪ್ರಯೋಜನಕಾರಿ. ತುಳಸಿ ಕೇವಲ ಜೀರ್ಣಕ್ರಿಯೆಗೆ ಮಾತ್ರವಲ್ಲ, ರೋಗನಿರೋಧಕ ಶಕ್ತಿಯ ಆಗರ.

ವೈದ್ಯರನ್ನು ಸಂಪರ್ಕಿಸಿ: ಹೆಚ್ಚು ತೂಕ ಹೊಂದಿರುವವರು ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಬಗ್ಗೆ ಹುಷಾರಾಗಿರಬೇಕು. ಸ್ಥೂಲಕಾಯ ದೇಹದಲ್ಲಿ ಆಮ್ಲ ಮತ್ತು ಲವಣಗಳ ಪ್ರಮಾಣವನ್ನು ಹೆಚ್ಚಿಸಬಹುದು. ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರ ಕ್ರಮಗಳಿವೆ. ಹಲವಾರು ಮಾತ್ರೆಗಳು ಮತ್ತು ಕಷಾಯಗಳ ಸೇವನೆ ಉಪಯೋಗಕಾರಿ. ಹೆಚ್ಚು ನೀರನ್ನು ಕುಡಿದರೆ ಮೂತ್ರಕೋಶದಲ್ಲಿರುವ ಕಲ್ಲುಗಳು ನಿಧಾನವಾಗಿ ಕರಗಿ ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಒಂದಕ್ಕಿಂತ ಹೆಚ್ಚು/ದೊಡ್ಡಗಾತ್ರದ ಕಲ್ಲುಗಳು ಇದ್ದರೆ ಸ್ವಲ್ಪ ದೀರ್ಘಾವಧಿಯ ಚಿಕಿತ್ಸೆಯು ಬೇಕಾಗಬಹುದು. ಪಂಚಕರ್ಮ ಚಿಕಿತ್ಸೆಯ ವಿರೇಚನ ಕೂಡ ಒಳ್ಳೆಯದು. ಆದರೆ ಯಾವುದಕ್ಕೂ ವೈದ್ಯರನ್ನು ಕಾಣಬೇಕು.

Share This Article