ದೆಹಲಿ-ಜೈಪುರ್ ಹೈವೇಯಲ್ಲಿ ಸರಣಿ ಅಪಘಾತ – ನಾಲ್ವರ ದುರ್ಮರಣ

Public TV
1 Min Read
ACCIDENT 2

ನವದೆಹಲಿ: ಟ್ಯಾಂಕರ್, ಕಾರು (Car) ಹಾಗೂ ವ್ಯಾನ್ ನಡುವಿನ ಸರಣಿ ಅಪಘಾತದಲ್ಲಿ (Accident) ನಾಲ್ವರು ಸಾವನ್ನಪ್ಪಿದ ಘಟನೆ ದೆಹಲಿ-ಜೈಪುರ್ ಹೆದ್ದಾರಿಯಲ್ಲಿ ನಡೆದಿದೆ.

ಜೈಪುರದಿಂದ ಬರುತ್ತಿದ್ದ ತೈಲ ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಹಾಗೂ ವ್ಯಾನ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಸಿಎನ್‍ಜಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ ವ್ಯಾನ್‍ಗೆ ಸಹ ಟ್ಯಾಂಕರ್ ಡಿಕ್ಕಿಯಾಗಿದ್ದರಿಂದ ಅದರ ಚಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ – ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಾಚರಣೆ

ಕಾರಿನಲ್ಲಿದ್ದವರು ಜೈಪುರಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಟ್ಯಾಂಕರ್ ಚಾಲಕನನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಅಪಘಾತದ ಬಳಿಕ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಡಿಯಲ್ಲಿ 14 ಸಾವಿರ ರೂ. ಕದ್ದ ಆರೋಪ – ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಅರೆಸ್ಟ್

Share This Article