ವಿಜಯೇಂದ್ರ ಆಯ್ಕೆ ಹಿಂದಿನ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು?

Public TV
2 Min Read
BY VIJAYENDRA

ಬೆಂಗಳೂರು: ಅಸೆಂಬ್ಲಿ ಚುನಾವಣೆಯಲ್ಲಿ ಎದುರಾದ ಆಘಾತಕಾರಿ ಸೋಲಿನಿಂದ ನಿರಾಸೆಯ ಮಡುವಿನಲ್ಲಿ ಮುಳುಗಿದ್ದ ರಾಜ್ಯ ಬಿಜೆಪಿಗೆ ಬರೋಬ್ಬರಿ ಅರು ತಿಂಗಳ ಬಳಿಕ ಹೈಕಮಾಂಡ್ ಜೋಶ್ ತುಂಬುವ ರೀತಿಯ ಟಾನಿಕ್ ನೀಡಿದೆ. ಇದನ್ನು ಬೇಕಿದ್ರೆ ರಾಜ್ಯ ಬಿಜೆಪಿಗೆ (BJP) ದೀಪಾವಳಿ ಗಿಫ್ಟ್ ಎಂದರೂ ತಪ್ಪಾಗಲಿಕ್ಕಿಲ್ಲ.

ಲೋಕಸಭಾ ಚುನಾವಣೆ (Loksabha Election) ದೃಷ್ಟಿಯಿಂದ ಇನ್ನು ತಡ ಮಾಡಿದ್ರೆ ಸರಿ ಹೋಗಲ್ಲ ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಸಾಕಷ್ಟು ಅಳೆದುತೂಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಕಟೀಲ್ ಸ್ಥಾನಕ್ಕೆ ಯಾರು ಎಂಬ ಕುತೂಹಲಕ್ಕೆ ಹೈಕಮಾಂಡ್ ತೆರೆ ಎಳೆದಿದೆ.

BY VIJAYENDRA

ಬಿಜೆಪಿ ಹೈಕಮಾಂಡ್ (BJP HighCommand) ಈ ಆದೇಶ ಹೊರಡಿಸಿದ ಸಂದರ್ಭದಲ್ಲಿ ಧವಳಗಿರಿ ನಿವಾಸದಲ್ಲಿ ತಂದೆ ಯಡಿಯೂರಪ್ಪ ಜೊತೆಗೆ ವಿಜಯೇಂದ್ರ ಇದ್ದರು. ಹೈಕಮಾಂಡ್ ಆದೇಶ ನೋಡಿ ಇಬ್ಬರು ಫುಲ್ ಖುಷಿಯಾದ್ರು. ಒಳ್ಳೆಯದಾಗಲಿ ಎಂದು ಪುತ್ರನಿಗೆ ಯಡಿಯೂರಪ್ಪ ಹರಸಿದ್ರು. ಈ ಬೆನ್ನಲ್ಲೇ ವಿಜಯೇಂದ್ರಗೆ ಅಭಿನಂದನೆಗಳ ಮಹಾಪೂರವೇ ಹರಿದುಬರಲು ಶುರುವಾಯ್ತು.

ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ: ವಿಜಯೇಂದ್ರ

ಹಲವು ನಾಯಕರು ಮತ್ತೆ ಬಿಎಸ್‍ವೈ ಮನೆಯನ್ನು ಎಡತಾಕಿದ್ರು. ಶಿಕಾರಿಪುರದಲ್ಲಿ, ಯಾದಗಿರಿಯಲ್ಲಿ ವಿಜಯೇಂದ್ರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ತಮ್ಮ ಮೇಲೆ ವಿಶ್ವಾಸವಿಟ್ಟು ಅತಿದೊಡ್ಡ ಜವಾಬ್ದಾರಿ ನೀಡಿದ ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ಧನ್ಯವಾದ ಹೇಳಿದ್ರು. ಸದ್ಯದಲ್ಲೇ ಎದುರಾಗಲಿರುವ ಲೋಕಸಭೆ ಚುನಾವಣೆ ಸವಾಲನ್ನು ಸಮರ್ಥವಾಗಿ ಎದುರಿಸಿ, ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಲು ಕೆಲಸ ಮಾಡೋದಾಗಿ ವಿಜಯೇಂದ್ರ ಪ್ರಕಟಿಸಿದ್ರು. ಮಾಜಿ ಮಂತ್ರಿ ಸೋಮಣ್ಣ ಆದಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದಾಗಿ ವಿಜಯೇಂದ್ರ ಘೋಷಿಸಿದರು.

ಹೈಕಮಾಂಡ್ ಲೆಕ್ಕಾಚಾರ ಏನು?: ರಾಜ್ಯದಲ್ಲಿ ಬಿಜೆಪಿಗೆ ಬಿಎಸ್‍ವೈ ಅನಿವಾರ್ಯವಾಗಿದ್ದಾರೆ. ಮುಂಬರುವ ಲೋಕಸಮರಕ್ಕೆ ಈ ಮೂಲಕ ಬಿಎಸ್‍ವೈ ಶಕ್ತಿ ಬಳಕೆ ತಂತ್ರ ರೂಪಿಸಲಾಗಿದೆ. ಜೊತೆಗೆ ಲಿಂಗಾಯತರನ್ನು ಕೈಬಿಟ್ಟಿಲ್ಲ ಎನ್ನುವ ಸಂದೇಶ ರವಾನಿಲಾಗಿದೆ.

ಲಿಂಗಾಯತ ಸಮುದಾಯದ ಮತಬ್ಯಾಂಕ್ ರಕ್ಷಣೆಯ ಪ್ಲಾನ್ ಇದಾಗಿದ್ದು, ಸಮುದಾಯದ ನಾಯಕರ ವಲಸೆಗೂ ತಡೆಯೊಡ್ಡುವ ತಂತ್ರವಾಗಿದೆ. ಆಪರೇಷನ್ ಹಸ್ತ ತಡೆಯಲು ವಿಜಯೇಂದ್ರ `ಶಕ್ತಿ’ ಬಳಕೆ ಮಾಡಲಾಗುತ್ತಿದೆ. ಯಾಕೆಂದರೆ ವಿಜಯೇಂದ್ರ ಅವರು ಯುವ ಮುಖ, ಮಾಸ್ ಫೇಸ್ ಆಗಿದ್ದಾರೆ. ಪಕ್ಷ ಸಂಘಟನೆಗೆ ದೀರ್ಘಾವಧಿ ನಾಯಕತ್ವದ ದೃಷ್ಟಿಯಿಂದಲೂ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಲಿಂಗಾಯತ ಹಾಗೂ ಒಕ್ಕಲಿಗ ನಾಯಕತ್ವ ಕಾಂಬಿನೇಶನ್‍ಗೆ ಪ್ಲಾನ್ ಮಾಡಲಾಗಿದೆ.

Share This Article