ಯಡಿಯೂರಪ್ಪನವರ ಮಗನಿಗೆ ಅಭಿನಂದನೆಗಳು- ಬಿಜೆಪಿ ಕಾಲೆಳೆದ ಕಾಂಗ್ರೆಸ್

Public TV
1 Min Read
BY VIJAYENDRA CONGRESS

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಬಿ.ವೈ ವಿಜಯೇಂದ್ರ (BY Vijayendra) ಅವರು ಅಲಂಕರಿಸುತ್ತಿದ್ದಂತೆಯೇ ಕಾಂಗ್ರೆಸ್ (Congress) ಪಕ್ಷವು ಬಿಜೆಪಿಯ (BJP) ಕಾಲೆಳೆದಿದೆ.

ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ತಮ್ಮ ಎಕ್ಸ್ ಖಾತೆಯಲ್ಲಿ, “ಯಡಿಯೂರಪ್ಪನವರ ಮಗ” ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ “ಯಡಿಯೂರಪ್ಪನವರ (bS Yediyurappa) ಮಗ”ನಿಗೆ ಅಭಿನಂದನೆಗಳು. “ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ” ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ಬರೆದುಕೊಳ್ಳಲಾಗಿದೆ.

ಇತ್ತ ರಾಜ್ಯಾಧ್ಯಕ್ಷರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಈ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡುವ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗುತ್ತೇನೆ. ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಸೋಮಣ್ಣ ಅಶೋಕ್ ಯತ್ನಾಳ್ ಬೊಮ್ಮಾಯಿ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

Share This Article