Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ- ಮಾಲಿನ್ಯ ಕುರಿತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ತರಾಟೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ- ಮಾಲಿನ್ಯ ಕುರಿತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ತರಾಟೆ

Court

ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ- ಮಾಲಿನ್ಯ ಕುರಿತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ತರಾಟೆ

Public TV
Last updated: November 10, 2023 3:40 pm
Public TV
Share
2 Min Read
supreme Court 1
SHARE

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮಾಲಿನ್ಯ ನಿಯಂತ್ರಣಕ್ಕೆ ಪ್ರಾಯೋಗಿಕ ಪರಿಹಾರಗಳೊಂದಿಗೆ ಮುಂದಿನ ವಿಚಾರಣೆಗೆ ಬರಬೇಕು. ಇಲ್ಲಿಯ ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ. ಮುಖ್ಯ ಕಾರ್ಯದರ್ಶಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಕೋರ್ಟಿಗೆ ಕರೆಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಎಚ್ಚರಿಕೆ ನೀಡಿದೆ.

ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ನೀವು ಬೇಕಾದುದನ್ನು ಮಾಡಿ, ನಾವು ಏನನ್ನೂ ಹೇಳುತ್ತಿಲ್ಲ ಅಥವಾ ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ. ನೀವೂ ಏನು ಮಾಡದಿದ್ದರೆ ನಾವು ಏನಾದರೂ ಮಾಡಬೇಕಾಗುತ್ತದೆ ಎಂದು ಸರ್ಕಾರಗಳ ವಿರುದ್ಧ ಛೀಮಾರಿ ಹಾಕಿತು.

ಕೃಷಿ ತಾಜ್ಯ ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಅದು ಕೂಡಲೇ ನಿಲ್ಲಬೇಕು. ನಾವು ಮಧ್ಯಪ್ರವೇಶಿಸಿದ ನಂತರವೇ ಕೆಲಸಗಳು ಏಕೆ ನಡೆಯುತ್ತವೆ? ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಬಿಡುವುದಾಗಿ ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಸುಮಲತಾ ಬೆಂಗಳೂರು ಉತ್ತರಕ್ಕೆ ಬಂದ್ರೆ ಸ್ವಾಗತ- ಸದಾನಂದಗೌಡ

ವಿಚಾರಣೆ ವೇಳೆ ದೆಹಲಿಯಲ್ಲಿ (New Delhi) ಜಾರಿ ಮಾಡಿದ್ದ ಸಮ ಬೆಸ ಯೋಜನೆ ಯಶಸ್ವಿಯಾಗಿದೆ ಎಂದು ಸರ್ಕಾರ ಹೇಳಿದೆ. ಬೆಸ-ಸಮ ಯೋಜನೆಯು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಿದೆ. ವಾಹನಗಳ ಹೊರಸೂಸುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಸಾರಿಗೆಯ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜೊತೆಗೆ ಇಂಧನ ಬಳಕೆಯಲ್ಲಿ 15 ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಇದೇ ವೇಳೆ ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸುವ ಬಗ್ಗೆ ಮಾಹಿತಿ ನೀಡಿದೆ. ಕೃತಕ ಮಳೆ ಸುರಿಸಲು ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಸಿದ್ಧವಿದೆ. ಹಣಕಾಸು ಖರ್ಚು ಮಾಡಲು ತಯಾರಿದೆ. ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಬೆಂಬಲಿಸಿದರೆ ದೆಹಲಿ ಸರ್ಕಾರವು ನವೆಂಬರ್ 20 ರೊಳಗೆ ಮೊದಲ ಕೃತಕ ಮಳೆಗೆ ವ್ಯವಸ್ಥೆ ಮಾಡಬಹುದು ಎಂದು ಸರ್ಕಾರದ ಪರ ವಕೀಲರು ಹೇಳಿದರು.

ಮುಂದುವರಿದು ತಂತ್ರಜ್ಞಾನವನ್ನು ಬಳಸಲು ಅಗತ್ಯವಾದ ಅನುಮತಿಗಳು ಪಡೆಯುವುದು ಸಮಯ-ಸೂಕ್ಷ್ಮ ವಿಷಯವಾಗಿದೆ ಎಂದು ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಇದರಲ್ಲಿ ನ್ಯಾಯಾಲಯ ಏಕೆ ಮಧ್ಯಪ್ರವೇಶಿಸಬೇಕು? ಅಗತ್ಯ ಅನುಮತಿಗಳನ್ನು ದೆಹಲಿ ಸರ್ಕಾರ ಪಡೆಯಬೇಕು ಎಂದು ಸೂಚಿಸಿತು.

ಅಮಿಕಸ್ ಅಪರಾಜಿತಾ ಸಿಂಗ್ ವಾದ ಮಂಡಿಸಿ, ಕೃಷಿ ತಾಜ್ಯ ಒಟ್ಟು ಮಾಲಿನ್ಯದ 24% ರಷ್ಟು ಕೊಡುಗೆ ನೀಡಿದರೆ, ಕಲ್ಲಿದ್ದಲು ಮತ್ತು ಹಾರುಬೂದಿ 17% ರಷ್ಟು ಮತ್ತು ವಾಹನಗಳು ಮಾಲಿನ್ಯದಿಂದ 16% ರಷ್ಟು ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮಾಲಿನ್ಯದ ಮೂಲಗಳ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅವರು ನ್ಯಾಯಾಲಯದ ಮಧ್ಯಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ನಮ್ಮಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆದರೆ ಯಾರೂ ಏನನ್ನೂ ಮಾಡುತ್ತಿಲ್ಲ. ನಮಗೆ ಫಲಿತಾಂಶಗಳು ಬೇಕು, ನಾವು ತಜ್ಞರಲ್ಲ. ಆದರೆ ನಮಗೆ ಪರಿಹಾರಗಳು ಬೇಕು ಎಂದು ಚಾಟೀ ಬೀಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 21 ಕ್ಕೆ ನಿಗದಿಪಡಿಸಿತು.

TAGGED:newdelhiSupreme Courtನವದೆಹಲಿಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Dhurandhar Movie
ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?
Cinema Latest Top Stories
Premi Movie 2
`ಪ್ರೇಮಿ’ಗಾಗಿ ಮೊದಲ ಹಾಡು ಬಿಡುಗಡೆ
Cinema Latest Sandalwood
MB Khazima
ವಿಶ್ವ ಚಾಂಪಿಯನ್ ಖಾಜಿಮಾ ಬಯೋಪಿಕ್‌ಗೆ ಚಾಲನೆ
Cinema Latest Sandalwood South cinema Top Stories
Dhruva sarja
ರಂಗನತಿಟ್ಟು ಪಕ್ಷಿಧಾಮದ ಕಾರ್ಮಿಕರಿಗೆ ಧ್ರುವ ಸಹಾಯಹಸ್ತ – ರಿಯಲ್‌ ಹೀರೋ ಅಂದ್ರು ಫ್ಯಾನ್ಸ್‌
Cinema Latest Sandalwood Top Stories

You Might Also Like

coffee worth thousands of rupees stolen 6 arrested in hassan beluru
Crime

ಕಾಫಿ ಬೆಳೆಗಾರನಿಗೆ ಥಳಿಸಿ ಕಳ್ಳತನ – 6 ಮಂದಿ ಅರೆಸ್ಟ್

Public TV
By Public TV
17 minutes ago
elephant mundagod
Latest

ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ; ಗಂಟೆಗಟ್ಟಲೇ ರಸ್ತೆ ಬಂದ್

Public TV
By Public TV
20 minutes ago
US Shooting
Crime

ಅಮೆರಿಕದಲ್ಲಿ ಎಂಜಿನಿಯರಿಂಗ್‌ ಪರೀಕ್ಷೆ ವೇಳೆ ಗುಂಡಿನ ದಾಳಿ; ಇಬ್ಬರು ಸಾವು, 8 ಮಂದಿಗೆ ಗಾಯ

Public TV
By Public TV
43 minutes ago
DVG SOUND AV 6
Chitradurga

ದಾವಣಗೆರೆ ಗಡಿ ಗ್ರಾಮದಲ್ಲಿ ವಿಚಿತ್ರ ಶಬ್ಧ – ಬೆಚ್ಚಿಬಿದ್ದ ಗ್ರಾಮಸ್ಥರು

Public TV
By Public TV
55 minutes ago
Cabbage Kabab
Food

ಸಂಡೇ ಸ್ಪೆಷಲ್ ಕ್ಯಾಬೇಜ್ ಕಬಾಬ್ ಮಾಡಿ…… ಸವಿಯಿರಿ

Public TV
By Public TV
8 hours ago
DK Shivakumar 4
Bengaluru City

Video | ದೆಹಲಿಗೆ ಬಂದಿಳಿದ ಡಿಕೆಶಿ – ಸೋನಿಯಾ ಗಾಂಧಿ ಭೇಟಿ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿಸಿಎಂ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?