ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ

Public TV
1 Min Read
Miscreants Vandalized Several Parked Vehicles in Laggere Rajiv Gandhi Nagar Bengaluru 2

ಬೆಂಗಳೂರು: ಕುಡಿದ ಮತ್ತಿನಲ್ಲಿ ಲಾಂಗ್‌, ಮಚ್ಚಿನಿಂದ ವಾಹನಗಳನ್ನು ಜಖಂ ಮಾಡಿದ ಘಟನೆ ಲಗ್ಗೆರೆಯ ರಾಜೀವ್ ಗಾಂಧಿ ನಗರದಲ್ಲಿ (Laggere, Rajiv Gandhi Nagar) ನಡೆದಿದೆ.

ಸುಮಾರು 30 ಕ್ಕೂ ಹೆಚ್ಚು ವಾಹನಗಳ (Vehicles) ಮೇಲೆ ಪುಂಡರು ಲಾಂಗ್ ಬೀಸಿದ್ದಾರೆ. ಶುಕ್ರವಾರ ನಸುಕಿನ ಜಾವ 2-3 ಗಂಟೆಯ ವೇಳೆಗೆ ಮುಖಕ್ಕೆ ಮಾಸ್ಕ್‌ ಧರಿಸಿದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Miscreants Vandalized Several Parked Vehicles in Laggere Rajiv Gandhi Nagar Bengaluru 1

ಪುಂಡರ ಕಿತಾಪತಿಗೆ 12 ಕಾರು, 1 ಆಟೋ, 4 ಟೆಂಪೋಗಳ ಗ್ಲಾಸ್‌ ಪುಡಿ ಪುಡಿಯಾಗಿದೆ. 3 ಮಂದಿ ಕಿಡಿಗೇಡಿಗಳು ಮೂರು ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ಕೇವಲ 5 ನಿಮಿಷದಲ್ಲೇ 30 ಕ್ಕೂ ಹೆಚ್ಚು ವಾಹನಗಳ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳೀಯ ಕಿಡಿಗೇಡಿಗಳೇ ಈ ಕೃತ್ಯ ಎಸಗಿರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಭೇಟಿ ನೀಡಿದ ಬಳಿಕ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.

 

Share This Article