Bigg Boss: ನಮ್ರತಾಗೆ ರೊಮ್ಯಾನ್ಸ್‌ ಬಗ್ಗೆ ಸ್ನೇಹಿತ್‌ ಸ್ಪೆಷಲ್‌ ಕ್ಲಾಸ್

Public TV
2 Min Read
namratha gowda

‘ಬಿಗ್’ ಮನೆಯಲ್ಲಿ (Bigg Boss House) ಮತ್ತೊಂದು ಚೆಂದದ ಜೋಡಿಯಾಗಿ ನಮ್ರತಾ ಗೌಡ (Namratha Gowda) ಮತ್ತು ಸ್ನೇಹಿತ್ (Snehith Gowda) ಹೈಲೆಟ್ ಆಗಿದ್ದಾರೆ. ನಮ್ರತಾ ಹಿಂದೆ ಹಿಂದೆ ಹೋಗೋದು. ತುಂಟಾಟ ಆಡೋದು ಈಗಂತೂ ಸ್ನೇಹಿತ್‌ಗೆ ಟಾಸ್ಕ್ ಆಗಿ ಹೋಗಿದೆ. ಹೀಗಿರುವಾಗ ನಮ್ರತಾ ಜೊತೆ ರೊಮ್ಯಾನ್ಸ್ ಮಾಡೋದು ಇಷ್ಟ ಎಂದಿದ್ದಾರೆ ಸ್ನೇಹಿತ್. ಇದನ್ನೂ ಓದಿ:ಕಮಲ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾದ ಶಿವಣ್ಣ

namratha gowda 1 1

ಮೊನ್ನೆಯಷ್ಟೇ ಕಿಚ್ಚನ ಪಂಚಾಯಿತಿಯಲ್ಲಿ ನಮ್ರತಾ ಕಡೆಯಿಂದ ಎಂದೂ ರಾಖಿ ಕಟ್ಟಿಸಿಕೊಳ್ಳೋದಿಲ್ಲ ಎಂದು ನೇರವಾಗಿ ಸುದೀಪ್ (Sudeep) ಮುಂದೆ ಸ್ನೇಹಿತ್ ಹೇಳಿದ್ದರು. ಆಗ ಕಿಚ್ಚ, ಸರಿ ನಿಮಗೊಂದು ವಾರ ಕಾಲಾವಕಾಶ ಕೊಡುತ್ತೇನೆ ಅದೇನು ಮಾಡ್ತಿರೋ ಮಾಡಿ. ನಮ್ರತಾನಾ ಒಪ್ಪಿಸಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದನ್ನೇ ಸ್ನೇಹಿತ್ ಸಿರಿಯಸ್ ಆಗಿ ಪರಿಣಿಸಿದಂತಿದೆ. ಈಗ ನಮ್ರತಾಗೆ ಸ್ನೇಹಿತ್ ಕಾಳು ಹಾಕೋಕೆ ಶುರು ಮಾಡಿದ್ದಾರೆ. ಅವರು ಅದೆಷ್ಟೇ ಹುಸಿ ಮುನಿಸು ತೋರಿಸಿದ್ದರು. ನಮ್ರತಾರನ್ನ ಬಿಟ್ಟು ಬಿಡದೇ ಸ್ನೇಹಿತ್ ಕಾಡ್ತಿದ್ದಾರೆ. ಇದೀಗ ನಮ್ರತಾ ಮುಂದೆ ರೊಮ್ಯಾನ್ಸ್ ಬಗ್ಗೆ ಸ್ನೇಹಿತ್ ಮಾತೆತ್ತಿದ್ದಾರೆ. ಇದನ್ನೂ ಓದಿ:ಕಮಲ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾದ ಶಿವಣ್ಣ

bigg boss

ನೀವು ಬಂದ ಮೇಲೆ ಸೂರ್ಯ ಹೊರಗೆ ಬಂದ ನೋಡಿ ಎಂದ ಸ್ನೇಹಿತ್ ನಮ್ರತಾಗೆ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ನನ್ನ ಜಾಗದಲ್ಲಿ ಬೇರೇ ಹುಡುಗಿ ಇದಿದ್ರೆ ವರ್ಕೌಟ್ ಆಗ್ತಿತ್ತು ಎಂದು ನಮ್ರತಾ, ಸ್ನೇಹಿತ್ ಎಚ್ಚರಿಸಿದ್ದಾರೆ. ನಮ್ಮ ವರ್ಕೌಟ್ ನಾವು ಮಾಡ್ತಿರಬೇಕು. ಉಳಿದಿದೆಲ್ಲ ದೇವರಿಗೆ ಬಿಡಬೇಕು ಎಂದು ಸ್ನೇಹಿತ್ ನಮ್ರತಾಗೆ ಪ್ರತಿಯುತ್ತರ ನೀಡಿ ಸ್ಮೈಲ್ ಮಾಡಿದ್ದಾರೆ. ಸ್ನೇಹಿತ್ ಅವರ ತಂದೆ-ತಾಯಿ ಇದನ್ನ ನೋಡ್ತಿದ್ರೆ, ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದಾರೆ ನಮ್ರತಾ.

ಇಷ್ಟಕ್ಕೆ ನಿಲ್ಲದ ಇಬ್ಬರ ಮಾತು, ರೊಮ್ಯಾನ್ಸ್ವರೆಗೂ ಹೋಗಿದೆ. ಅಯ್ಯೋ ಇದನ್ನೆಲ್ಲಾ ಸಖತ್ ಆಗಿ ನನ್ನ ತಾಯಿ ಎಂಜಾಯ್ ಮಾಡ್ತಿರುತ್ತಾರೆ. ನನ್ನಮ್ಮನಿಗೆ ನಾನು ರೊಮ್ಯಾನ್ಸ್ ಮಾಡೋದು ತುಂಬಾ ಇಷ್ಟ ಎಂದ ಸ್ನೇಹಿತ್ ಮಾತಿಗೆ ನಮ್ರತಾ ಶಾಕ್ ಆಗಿದ್ದಾರೆ. ರೊಮ್ಯಾನ್ಸ್ ಅಂದರೆ ಒಬ್ಬ ಮಹಿಳೆನ ನೀವೆಷ್ಟು ಗೌರವಿಸುತ್ತೀರಾ ಅನ್ನೋದೇ ರೊಮ್ಯಾನ್ಸ್ ಅರ್ಥ. ಹಾಗಾಗಿ ನನ್ನ ತಾಯಿ ಇದೆನ್ನೆಲ್ಲಾ ನೋಡಿ ಎಂಜಾಯ್ ಮಾಡ್ತಿರುತ್ತಾರೆ ಎಂದಿದ್ದಾರೆ. ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ನಮ್ರತಾ ಜೊತೆ ರೊಮ್ಯಾನ್ಸ್ ಮಾಡೋದು ನನಗಿಷ್ಟ ಎಂದು ಸ್ನೇಹಿತ್ ಮನದ ಇಂಗಿತವನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ದೊಡ್ಮನೆಯ ಮತ್ತೊಂದು ಜೋಡಿ, ರಿಯಲ್ ಜೋಡಿ ಆಗುವತ್ತ ಹೆಜ್ಜೆ ಇಡ್ತಿದ್ದಾರೆ.

Share This Article