ನಾಪತ್ತೆಯಾಗಿ ಮೂರು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಪತ್ತೆಯಾದ 85ರ ವೃದ್ಧೆ

Public TV
1 Min Read
SHARADAMMA

ಶಿವಮೊಗ್ಗ: ಹೊಸನಗರದ (Hosanagara) ಸಾದಗಲ್ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 85 ವರ್ಷದ ವೃದ್ಧೆ (Old Woman) ದಟ್ಟ ಕಾಡಿನಲ್ಲಿ (Forest) ಪತ್ತೆಯಾಗಿದ್ದಾರೆ.

ಕಳೆದ ಭಾನುವಾರ ಶಾರದಮ್ಮ ಎಂಬವರು ಮನೆಯ ಸಮೀಪದ ತೋಟಕ್ಕೆ ಹೋಗಿದ್ದರು. ಇದಾದ ಬಳಿಕ ವೃದ್ಧೆ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಅಜ್ಜಿ ಈಗ ಮೂರು ದಿನಗಳ ನಂತರ ಕಬ್ಬಿನ ಹಿತ್ತಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಕಾಡಿನಲ್ಲಿ ಕಿರುಚುತ್ತಿರುವ ಶಬ್ದ ಕೇಳಿ ಹುಡುಕಾಟ ನಡೆಸಿದಾಗ ವೃದ್ಧೆ ಸಿಕ್ಕಿದ್ದಾರೆ. ಮೂರು ದಿನಗಳ ಕಾಲ ವೃದ್ಧೆ ಅನ್ನ ನೀರು ಇಲ್ಲದೇ ಬದುಕಿದ್ದ ವಿಚಾರ ಈಗ ಆಶ್ಚರ್ಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಚಿಂತಾಮಣಿ ಮನೆಯ ಮೇಲೆ ಪೊಲೀಸ್‌ ದಾಳಿ – ಹುಲಿ ಉಗುರು ಪತ್ತೆ, ಯುವಕ ನಾಪತ್ತೆ

ವೃದ್ಧೆ ನಾಪತ್ತೆಯಾದ ವಿಚಾರ ಪೊಲೀಸರಿಗೆ (Police) ತಿಳಿಯುತ್ತಿದ್ದಂತೆ ಶೋಧಕ್ಕಾಗಿ ಶ್ವಾನದಳದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಅಜ್ಜಿ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.

ಪತ್ತೆಯಾದ ಶಾರದಮ್ಮ ಅವರಿಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧೆ ಕಾಡಿಗೆ ಏಕೆ ತೆರಳಿದ್ದರು ಎಂದು ತಿಳಿದು ಬಂದಿಲ್ಲ. ಇದನ್ನೂ ಓದಿ: ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

Share This Article