ಇಸ್ರೇಲ್‌ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ

Public TV
1 Min Read
iran india

ಟೆಹ್ರಾನ್: ಗಾಜಾ (Gaza) ಮೇಲಿನ ಇಸ್ರೇಲ್‌ (Israel) ದಾಳಿಗಳನ್ನು ಕೊನೆಗೊಳಿಸಲು ಭಾರತ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಮೋದಿಗೆ (Narendra Modi) ಕರೆ ಮಾಡಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಒತ್ತಾಯಿಸಿದ್ದಾರೆ.

ಮೋದಿ ಜೊತೆಗೆ ಫೋನ್‌ ಕರೆ ಮಾತುಕತೆ ವೇಳೆ ಇರಾನ್‌ (Iran) ಅಧ್ಯಕ್ಷ, ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧ ಭಾರತದ ಹೋರಾಟಗಳು ಹಾಗೂ ವಿಶ್ವದ ಅಲಿಪ್ತ ಚಳವಳಿಯ ಸಂಸ್ಥಾಪಕರ ದೇಶವಾದ ಭಾರತದ ಸ್ಥಾನವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

Israel Hamas War Israelis and Palestinians Blame Each Other for Blast at Gaza Hospital That Killed 500

ಗಾಜಾದ ತುಳಿತಕ್ಕೊಳಗಾದ ಜನರ ವಿರುದ್ಧ ಜಿಯೋನಿಸ್ಟ್‌ ಅಪರಾಧಗಳನ್ನು ಕೊನೆಗೊಳಿಸಲು ಭಾರತವು ತನ್ನೆಲ್ಲಾ ಸಾಮರ್ಥ್ಯ ಬಳಸುವ ನಿರೀಕ್ಷಿ ಇದೆ. ಕದನ ವಿರಾಮಕ್ಕಾಗಿ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹ್ರಾನ್ ಬೆಂಬಲಿಸುತ್ತದೆ. ಸಂಕಷ್ಟದಲ್ಲಿರುವ ಗಾಜಾದ ಜನರಿಗೆ ನೆರವು ನೀಡುತ್ತದೆ ಎಂದು ರೈಸಿ ತಿಳಿಸಿದ್ದಾರೆ.

Why Israel delaying Ground Invasion Of Gaza

ಪ್ಯಾಲೆಸ್ತೀನ್‌ ಜನರ ಹತ್ಯೆಯು ಪ್ರಪಂಚದ ಎಲ್ಲಾ ಸ್ವತಂತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆ, ಆಸ್ಪತ್ರೆಗಳು, ಶಾಲೆಗಳು, ಮಸೀದಿಗಳು, ಚರ್ಚ್‌ಗಳು ಮತ್ತು ವಸತಿ ಪ್ರದೇಶಗಳ ಮೇಲಿನ ದಾಳಿಗಳು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

ಎಲ್ಲಾ ದೇಶಗಳು ಸ್ವಾತಂತ್ರ್ಯಕ್ಕಾಗಿ ಪ್ಯಾಲೇಸ್ಟಿನಿ ಜನರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕು. ನಾಜಿ ಜರ್ಮನಿಯ ವಿರುದ್ಧ ಯುರೋಪಿಯನ್ ರಾಷ್ಟ್ರಗಳ ಹೋರಾಟ ಶ್ಲಾಘನೀಯ ಮತ್ತು ವೀರರ ಕೃತ್ಯವಾಗಿದೆ. ಆದರೆ ಮಕ್ಕಳ ಹತ್ಯೆ ಮತ್ತು ಕ್ರಿಮಿನಲ್ ಜಿಯೋನಿಸ್ಟ್ ಆಡಳಿತದ ವಿರುದ್ಧ ಪ್ಯಾಲೇಸ್ಟಿನಿಯನ್ ಜನರು ಹೋರಾಟ ನಡೆಸುವುದು ಖಂಡನೀಯವೇ ಎಂದು ಪ್ರಶ್ನಿಸಿದ್ದಾರೆ.

Share This Article