ತೀರ್ಥಹಳ್ಳಿಯಲ್ಲಿ ಪ್ರತಿಮಾ ಅಂತ್ಯಕ್ರಿಯೆ – ಪುತ್ರನಿಂದ ತಾಯಿಯ ಚಿತೆಗೆ ಅಗ್ನಿಸ್ಪರ್ಶ

Public TV
2 Min Read
Deputy Director prathima stabbed to death in bengaluru

ಶಿವಮೊಗ್ಗ: ಬೆಂಗಳೂರಿನಲ್ಲಿ ಹತ್ಯೆಯಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (Department Of Mines And Geology) ಉಪ ನಿರ್ದೇಶಕಿ (Deputy Director) ಪ್ರತಿಮಾ (Prathima) ಅಂತ್ಯಕ್ರಿಯೆ (Funeral) ಇಂದು ಶಿವಮೊಗ್ಗ (Shivamogga) ಜಿಲ್ಲೆ ತೀರ್ಥಹಳ್ಳಿಯ (Thirthahalli) ಹಿಂದೂ ರುದ್ರಭೂಮಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಕುಟುಂಬಸ್ಥರು ನೆರವೇರಿಸಿದರು.

ಪ್ರತಿಮಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರಾದ ಪ್ರತಿಮಾ ಉದ್ಯೋಗದ ನಿಮಿತ್ತ ಬೆಂಗಳೂರಿನ ಅಪಾರ್ಟ್ಮೆಂಟ್‌ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಪತಿ ಸತ್ಯನಾರಾಯಣ ಕೃಷಿಕರಾಗಿದ್ದ ಕಾರಣ ಪತಿ ಹಾಗು ಪುತ್ರ ಪಾರ್ಥ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದರು. ಪ್ರತಿಮಾ ರಜಾ ದಿನಗಳಲ್ಲಿ ಆಗಾಗ ತೀರ್ಥಹಳ್ಳಿಗೆ ಬಂದು ಹೋಗುತ್ತಿದ್ದರು. ಇದನ್ನೂ ಓದಿ:‌ 2013 ರಿಂದ ದಲಿತ ಸಿಎಂ ಓಡ್ತಿದೆ, ಪಿಕ್ಚರ್‌ ರಿಲೀಸ್ ಆಗ್ತಿಲ್ಲ: ಸತೀಶ್ ಜಾರಕಿಹೊಳಿ

ಸಣ್ಣ ವಯಸ್ಸಿನಲ್ಲೇ ಉನ್ನತ ಹುದ್ದೆಯಲ್ಲಿದ್ದ ಪ್ರತಿಮಾ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿದ್ದರು. ಆದರೆ ಇಂತಹ ಅಧಿಕಾರಿ ಪ್ರತಿಮಾ ಅವರನ್ನು ಶನಿವಾರ ರಾತ್ರಿ ಅವರ ಅಪಾರ್ಟ್ಮೆಂಟ್‌ನಲ್ಲೇ ಕೊಲೆ ಮಾಡಿದ್ದಾರೆ. ಕೊಲೆಯಾಗಿದ್ದ ಪ್ರತಿಮಾ ಅವರ ಮರಣೋತ್ತರ ಶವ ಪರೀಕ್ಷೆ ನಂತರ ಕುಟುಂಬಸ್ಥರು ಪ್ರತಿಮಾ ಮೃತದೇಹವನ್ನು ಭಾನುವಾರ ರಾತ್ರಿ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಕರೆತಂದಿದ್ದರು. ತೀರ್ಥಹಳ್ಳಿಯ ಸತ್ಯನಾರಾಯಣ ಅವರ ಮೂಲ ಮನೆಯಲ್ಲಿ ರಾತ್ರಿಯಿಂದ ಮುಂಜಾನೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಕಳೆದ ವಾರವಷ್ಟೇ ಗೃಹ ಪ್ರವೇಶವಾಗಿದ್ದ ನೂತನ ಮನೆಗೆ ಮುಂಜಾನೆ 10 ಗಂಟೆಗೆ ಹಳೆ ಮನೆಯಿಂದ ಹೊಸ ಮನೆಗೆ ಮೃತದೇಹ ಕೊಂಡೊಯ್ಯಲಾಯಿತು. ಅಲ್ಲಿ 10 ನಿಮಿಷಗಳ ಕಾಲ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮರುಸ್ಥಾಪನೆ

ನಂತರ ಪ್ರತಿಮಾ ಪಾರ್ಥಿವ ಶರೀರವನ್ನು ತುಂಗಾ ನದಿ ದಡದಲ್ಲಿರುವ ಹಿಂದೂ ರುದ್ರ ಭೂಮಿಗೆ ಕೊಂಡೊಯ್ಯಲಾಯಿತು. ಹಿಂದೂ ರುದ್ರಭೂಮಿಯಲ್ಲಿ ಪ್ರತಿಮಾ ಅವರಿಗೆ ಕುಟುಂಬಸ್ಥರು ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದರು. ತಾಯಿಯ ಚಿತೆಗೆ ಪುತ್ರ ಪಾರ್ಥ ಅಗ್ನಿ ಸ್ಪರ್ಶ ನೆರವೇರಿಸಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ. ಸರ್ಕಾರ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಮಾ ಕುಟುಂಬಸ್ಥರು ಹಾಗೂ ಸ್ಥಳೀಯರ ಆಗ್ರಹವಾಗಿದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ಕಂಡು ಮೋದಿಗೆ ನೋವಾಗಿದೆ: ಚಲುವರಾಯ ಸ್ವಾಮಿ

ಒಟ್ಟಾರೆ ಬಾಳಿ ಬದುಕಬೇಕಾದ ವಯಸ್ಸಿನಲ್ಲಿ, ಇನ್ನು ಹಂತ ಹಂತವಾಗಿ ಉನ್ನತ ಹುದ್ದೆ ಅಲಂಕರಿಸುವ ಕನಸು ಕಂಡಿದ್ದ ಪ್ರತಿಮಾ ಕನಸು ಕಮರಿ ಹೋಗಿದೆ. ಇದನ್ನೂ ಓದಿ: ಉಚಿತ ಭಾಗ್ಯದಿಂದ ಪರಿಶಿಷ್ಟರ ಅಂತ್ಯಕ್ರಿಯೆಗೂ ಸರ್ಕಾರದ ಬಳಿ ದುಡ್ಡಿಲ್ಲ: ಬಿಎಸ್‌ವೈ

Share This Article