ಗಣಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಸುಳಿವು ಸಿಕ್ಕಿದೆ: ಪರಮೇಶ್ವರ್

Public TV
1 Min Read
PRATHIMA PARAM

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ (Senior Woman Geologist Prathima) ಕೊಲೆ ಪ್ರಕರಣದಲ್ಲಿ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು (G Parameshwar), ಪ್ರತಿಮಾ ಕೊಲೆ ಪ್ರಕರಣದಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಅದರ ಆಧಾರದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡಿದ ಬಳಿಕ ಕೊಲೆಗೆ ಕಾರಣ ಏನು?. ಹಿಂದೆ ಮುಂದೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಈಗಲೇ ಏನು ಹೇಳೋಕೆ ಆಗೋದಿಲ್ಲ. ಘಟನೆ ಸಂಬಂಧ ಸಿಕ್ಕಿರೋ ಲೀಡ್ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ಬಾರಿ ಆರೋಪಿಯನ್ನ ಬಂಧನ ಮಾಡಿದ ಮೇಲೆ ಎಲ್ಲವೂ ಹೊರಗೆ ಬರಲಿದೆ ಅಂತ ತಿಳಿಸಿದರು. ಇದನ್ನೂ ಓದಿ: ಪ್ರತಿಮಾ ಕೊಲೆ ಪ್ರಕರಣ- ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ

PRATHIMA

ಇದೇ ವೇಳೆ ಪ್ರತಿಮಾ ಕೊಲೆ ವಿಚಾರದಲ್ಲಿ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ ಎಂಬ ಬಿಜೆಪಿ (BJP) ಟ್ವೀಟ್ ಗೆ ಕಿಡಿಕಾರಿದ ಅವರು, ಗೃಹ ಸಚಿವರು ಇದ್ದಾರಾ ಇಲ್ಲವಾ ಅಂತ ಬಿಜೆಪಿ ಅವರಿಗೆ ಗೊತ್ತಾಗಲಿದೆ ಎಂದು ಆಕ್ರೋಶ ಹೊರ ಹಾಕಿದ್ರು.

ನಡೆದಿದ್ದೇನು..?: ಪ್ರತಿಮಾ ಕಳೆದ 8 ವರ್ಷಗಳಿಂದ ಒಬ್ಬರೇ ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ನವೆಂಬರ್ 4ರಂದು ರಾತ್ರಿ 8.30ಗೆ ಪ್ರತಿಮಾ ಅವರನ್ನು ಮನೆಯ ಮುಂಭಾಗದಲ್ಲೇ ಉಸಿರುಗಟ್ಟಿಸಿ ಕತ್ತು ಇರಿದು ಕೊಲೆ ಮಾಡಲಾಗಿತ್ತು. ಇದೀಗ ಘಟನೆ ಸಂಬಂಧ ಪ್ರತಿಮಾ ಕಾರು ಚಾಲಕ ಕಿರಣ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Share This Article