ಹುಬ್ಬಳ್ಳಿ: ಪತ್ನಿ ಹಾಗೂ ಪೊಲೀಸರ ಮಾನಸಿಕ ಕಿರುಕುಳದಿಂದ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ (Public TV) ಮತ್ತು ಡಿಜಿಟಲ್ (Public TV Digital) ವರದಿ ನಿಜವಾಗಿದೆ. ಹುಬ್ಬಳ್ಳಿ ಕೋಟಿ ಲಿಂಗೇಶ್ವರ ನಗರದಲ್ಲಿ 28 ವರ್ಷ ನಿಖಿಲ್ ಎನ್ನುವ ಯುವಕ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಸುದ್ದಿ ಸತ್ಯಕ್ಕೆ ದೂರವಾದದ್ದು ,
ಠಾಣೆಯಲ್ಲಿ ಸ್ವೀಕೃತವಾಗಿದ್ದ ಅರ್ಜಿ ಕುರಿತು, ವಿಚಾರಣೆಗಾಗಿ ನೋಟಿಸ್ ಜಾರಿ ಮಾಡಿ ಠಾಣೆಗೆ ಕರೆಯಿಸಿದ್ದು, ಈ ಪ್ರಕರಣದ ಎದರುಗಾರರು ಮತ್ತು ದೂರುದಾರರು ಪರಸ್ಪರ ಬಗೆಹರಿಸಿಕೊಳ್ಳುವುದಾಗಿ ಕೈಬರಹದಲ್ಲಿ ಬರೆದುಕೊಟ್ಟು ಹೋಗಿರುತ್ತಾರೆ. https://t.co/ILHXglRQDj
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) November 3, 2023
ಯುವಕನ ಸಾವಿಗೆ ಆತನ ಪತ್ನಿ ಪ್ರೀತಿ ಮತ್ತು ಕೇಶ್ವಾಪುರ ಠಾಣೆಯ (Keshwapur Police Station) ಪೊಲೀಸ್ ಸಿಬ್ಬಂದಿ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದರು. ಇದನ್ನು ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಟಿವಿ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡಿತ್ತು. ಆದರೆ ಈ ವರದಿಯ ಲಿಂಕ್ ಅನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದರು.
ಇದಕ್ಕೆ ಪೊಲೀಸರ ಬಗ್ಗೆ ಮೃತ ನಿಖಿಲ್ (Nikhil Suicide) ಕುಟುಂಬಸ್ಥರು ಆರೋಪ ಮಾಡಿರುವ ವೀಡಿಯೋವನ್ನು ರೀ ಎಕ್ಸ್ ಮಾಡಲಾಗಿತ್ತು. ಪಬ್ಲಿಕ್ ಟಿವಿ ರೀಎಕ್ಸ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಕೇಶ್ವಾಪುರ ಠಾಣೆ ಪಿಐ ಸಾತೇನಳ್ಳಿ ಮತ್ತು ಎಎಸ್‍ಐ ಜಯಶ್ರೀ ಮತ್ತು ಪತ್ನಿ ಪ್ರೀತಿ ಸೇರಿದಂತೆ ಒಟ್ಟು 8 ಜನರ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ.
ನನ್ನ ಸಹೋದರನ ಆತ್ಮಹತ್ಯೆಗೆ ಪತ್ನಿ ಪ್ರೀತಿ ಕುಟುಂಬಸ್ಥರು ಮತ್ತು ಪೊಲೀಸರೇ ಕಾರಣ: ನಿಖಿಲ್ ಸಹೋದರ ರಘುವೀರ #Hubballi #Police #KarnatakaPolice @DgpKarnataka @DrParameshwara pic.twitter.com/wWxzt8dw16
— PublicTV (@publictvnews) November 3, 2023
ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿಖಿಲ್ ಪತ್ನಿ ಪ್ರೀತಿ, PI ಸಾತೇನಹಳ್ಳಿ ASI ಜಯಶ್ರೀ, ಪ್ರೀತಿ ತಂದೆ ಧನರಾಜ್, ತಾಯಿ ಮಂಜುಳಾ, ಸಂಬಂಧಿ ಆನಂದಪ್ಪ, ಆನಂದಪ್ಪನ ಪತ್ನಿ, ಜಯಶ್ರೀ ಸೇರಿದಂತೆ ಇತರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳದಲ್ಲಿ ಸಂಧಾನಕ್ಕೆ ಬಂದು 2 ಲಕ್ಷ ನೀಡುವಂತೆ ಪೊಲೀಸ್ರು ತಾಕೀತು; ನಿಖಿಲ್ ಆತ್ಮಹತ್ಯೆ
ಗಂಡ ಹೆಂಡತಿ ಜಗಳ ಬಗೆಹರಿಸಲು 2 ಲಕ್ಷಕ್ಕೆ ಬೇಡಿಕೆಯಿಟ್ಟಿರುವ ಆರೋಪ ಕೇಶ್ವಾಪುರ ಪೊಲೀಸರ ಮೇಲೆ ಕೇಳಿ ಬಂದಿತ್ತು. ಇದರಿಂದಾಗಿ ಮಾನಸಿಕ ಕಿರುಕುಳದಿಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದರು. ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ ಪೆಕ್ಟರ್ ಸಾತೇನಹಳ್ಳಿ, ASI ಜಯಶ್ರೀ ಚಲವಾದಿ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಮೃತ ನಿಖಿಲ್ ಕುಟುಂಬಸ್ಥರು ನೀಡಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿತ್ತು.
Web Stories