ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ

Public TV
1 Min Read
Nayan

ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿಯ ನಟಿ ನಯನಾ (Nayana) ಹೆಣ್ಣು ಮಗುವಿಗೆ (Baby girl) ಜನ್ಮ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ನಯನಾ, ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ.

nayana

ತೆರೆ ಮೇಲೆ ನಮ್ಮ ಮುಂದೆ ಪಾತ್ರಗಳಾಗಿ ಕಾಣುವ ನಮ್ಮನ್ನು ನಗಿಸುವ ನಮಗೆ ಮನರಂಜನೆ ನೀಡುವ ನಮ್ಮನ್ನು ಸಂತೋಷ ಪಡಿಸುವ ಕಲಾವಿದರು ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಸಂತೋಷವನ್ನೇ ಕಂಡಿರೋದಿಲ್ಲ. ಅದರಲ್ಲೂ ಕಲಾವಿದನಾಗಿ ಸಿನಿಮಾಗಳಲ್ಲಿಯೋ ಅಥವಾ ಕಿರುತೆರೆಯಲ್ಲಿಯೋ ಒಂದು ಹಂತಕ್ಕೆ ಬಂದು ನಿಲ್ಲೋವಾಗ ನಿಜಕ್ಕೂ ಅದೆಷ್ಟೋ ಜನ ಅರ್ಧ ಪಯಣದಲ್ಲಿಯೇ ತಮ್ಮ ಜರ್ನಿಯನ್ನು ಮುಗಿಸಿ ಹೋಗಿಬಿಟ್ಟಿರುತ್ತಾರೆ. ಇನ್ನೂ ಕೆಲವರು ಎಲ್ಲಾ ಅಡೆತಡೆಗಳನ್ನು ದಾಟಿ ಯಶಸ್ಸನ್ನು ಕಾಣುತ್ತಾರೆ. ಆ ಸಾಲಿಗೆ ನಟಿ ನಯನಾ ಸೇರುತ್ತಾರೆ.

nayana 1

ಹುಬ್ಬಳ್ಳಿಯ (Hubli) ಸಾಮಾನ್ಯ ಹುಡುಗಿ ನಯನಾ ಅವರು ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟು ತಾವು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ರು. ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ತಾನು ಸೈ ಅನ್ನೋದನ್ನ ಪ್ರೂವ್ ಮಾಡಿದ್ರು.

 

ಕಳೆದ ಮೂರು ವರ್ಷಗಳ ಹಿಂದೆ ಶರತ್ (Sharath) ಎಂಬುವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಈಗ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಈ ಹಿಂದೆ ಸಿಹಿ ಕಹಿ ಚಂದ್ರು ಅವರ ನಿರೂಪಣೆಯ ‘ಬೊಂಬಾಟ್ ಭೋಜನ’ ಕಾರ್ಯಕ್ರಮಕ್ಕೆ ನಟಿ ಎಂಟ್ರಿ ಕೊಟ್ಟಿದ್ದರು. ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನಟಿಯಗೆ ಶುಭಹಾರೈಸಿದ್ದಾರೆ.

Web Stories

Share This Article