ಪುನೀತ್ ರಾಜಕುಮಾರ್ (Puneet Rajkumar) ಹೆಸರಿನಲ್ಲಿ ಜಿಲ್ಲೆಗೊಂದರಂತೆ ಅಂಬ್ಯುಲೆನ್ಸ್ (Ambulance) ನೀಡುವುದಾಗಿ ಈ ಹಿಂದೆಯೇ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಘೋಷಣೆ ಮಾಡಿದ್ದರು. ಈ ಹಿಂದೆಯೂ ಅವರು ತಮ್ಮ ಪ್ರಕಾಶ್ ರಾಜ್ ಫೌಂಡೇಷನ್ ನಿಂದ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಅಂಬ್ಯುಲೆನ್ಸ್ ನೀಡಿದ್ದಾರೆ. ಇದೀಗ ಮತ್ತೈದು ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಕಾಶ್ ರಾಜ್, ‘ಕನ್ನಡ ರಾಜ್ಯೋತ್ಸವದ ಸಂಭ್ರಮದಂದು ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ ಪ್ರೀತಿ ಯಶ್ (Yash) ಹಾಗೂ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಅವರ ಸಹಕಾರದಿಂದ ನೆಮ್ಮೆಲ್ಲರ ಅಪ್ಪುವಿನ ಸವಿ ನೆನಪಲ್ಲಿ ಮತ್ತೈದು ಅಪ್ಪು ಎಕ್ಸ್ ಪ್ರೆಸ್ ಅಂಬ್ಯುಲೆನ್ಸ್ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಪ್ಪು ನೆನಪಿನ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಅವರ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಯಶ್ ಹೇಳಿದ್ದರು. ಅದಕ್ಕೆ ಕೆವಿಎನ್ ಪ್ರೊಡಕ್ಷನ್ ಕೂಡ ಸಾಥ್ ನೀಡಲಿದೆ ಎಂದು ಹೇಳಿಕೊಂಡಿದ್ದರು. ಅದರಂತೆ ಇದೀಗ ಐದು ಅಂಬ್ಯುಲೆನ್ಸ್ ಅನ್ನು ನೀಡಲಾಗಿದೆ. ಒಟ್ಟು 32 ಅಂಬ್ಯುಲೆನ್ಸ್ ನೀಡುವ ಗುರಿಯನ್ನು ಪ್ರಕಾಶ್ ರಾಜ್ ಹೊಂದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]