ಟೆಲ್ ಅವೀವ್: ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ (Indian-Origin Israeli Soldier) ಮೃತಪಟ್ಟಿದ್ದಾರೆ ಎಂದು ಪಟ್ಟಣದ ಮೇಯರ್ ಬುಧವಾರ ತಿಳಿಸಿದ್ದಾರೆ. ದಕ್ಷಿಣ ಇಸ್ರೇಲಿ ಪಟ್ಟಣ ಡಿಮೋನಾದ ಹಾಲೆಲ್ ಸೊಲೊಮನ್ (20) ಮೃತಪಟ್ಟ ಯೋಧ.
ಗಾಜಾದಲ್ಲಿ (Gaza) ನಡೆದ ಯುದ್ಧದಲ್ಲಿ ಡಿಮೋನಾ ಅವರ ಮಗ ಹಾಲೆಲ್ ಸೊಲೊಮನ್ ಅವರು ಮಡಿದ ಸುದ್ದಿಯನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ ಎಂದು ಡಿಮೋನಾದ ಮೇಯರ್ ಬೆನ್ನಿ ಬಿಟ್ಟನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ನಿಯಂತ್ರಣವಿಲ್ಲದ ಏಕೈಕ ಕ್ರಾಸಿಂಗ್ ದಾಟಿ ಈಜಿಪ್ಟ್‌ಗೆ ಹೊರಟ ವಿದೇಶಿಯರು
ಯೋಧನ ಪೋಷಕರ ದುಃಖದಲ್ಲಿ ನಾವು ಕೂಡ ಭಾಗಿದಾರರು. ಹಾಲೆಲ್ ಅವರು ಅರ್ಥಪೂರ್ಣ ಸೇವೆ ಮಾಡಲು ಹಾತೊರೆಯುತ್ತಿದ್ದರು. ಉತ್ತಮ ಗುಣದ ವ್ಯಕ್ತಿತ್ವದವರಾಗಿದ್ದರು. ಇಡೀ ಡಿಮೋನಾ ನಗರವು ಅವರ ಅಗಲಿಕೆಯಿಂದ ದುಃಖಿತವಾಗಿದೆ ಎಂದು ವಿಷಾದಿಸಿದ್ದಾರೆ.
ಇಸ್ರೇಲ್‌ನ ಪರಮಾಣು ರಿಯಾಕ್ಟರ್‌ನೊಂದಿಗೆ ಗುರುತಿಸಲ್ಪಟ್ಟ ಇಸ್ರೇಲ್‌ನ ದಕ್ಷಿಣದಲ್ಲಿರುವ ಒಂದು ಪಟ್ಟಣ ಡಿಮೋನಾ. ಈ ಟೌನ್‌ಶಿಪ್‌ನಲ್ಲಿ ಭಾರತದ ಯಹೂದಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಸ್ರೇಲ್‌ನಲ್ಲಿ ಇದು “ಪುಟ್ಟ ಭಾರತ” ಎಂದು ಹೆಸರಾಗಿದೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
ಗಾಜಾದಲ್ಲಿ ನಡೆದ ಯುದ್ಧದಲ್ಲಿ ಕನಿಷ್ಠ 11 ಇಸ್ರೇಲಿ ಸೈನಿಕರು ಹತ್ಯೆಯಾಗಿದ್ದಾರೆ. ಬಲಿದಾನಗೈದ ಯೋಧರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಮರಿಸಿದ್ದಾರೆ. ಆದರೆ ಗೆಲುವು ಸಿಗುವ ವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]