‘ಬಿಗ್ ಬಾಸ್’ ಇತಿಹಾಸದಲ್ಲೇ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡ ತನಿಷಾ

Public TV
1 Min Read
Tanisha Kuppunda 2

ನ್ನಡದ ಸಿನಿಮಾ ಮತ್ತು ಕಿರುತೆರೆ ನಟಿ ತನಿಷಾ ಕುಪ್ಪಂಡಗೆ (Tanisha Kuppunda) ಟೈಮ್ಸ್ ಸ್ಕ್ವೇರ್  (Times Square) ಮೂಲಕ ಶುಭಾಶಯ ಹೇಳಲಾಗಿದೆ. ಬಿಗ್ ಬಾಸ್ (Bigg Boss Kannada) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರಿಗೆ ಈ ಮೂಲಕ ಹಾರೈಸಲಾಗಿದೆ. ಇದು ತನಿಷಾಗೆ ಗೊತ್ತಿಲ್ಲದೇ ಇದ್ದರೂ, ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

Tanisha Kuppunda 1

‘ಆಲ್ ದಿ ಬೆಸ್ಟ್ ತನಿಷಾ ಕುಪ್ಪಂಡ. ವಿ ಆರ್ ವಿತ್ ಯು’ ಎಂದು ಟೈಮ್ಸ್ ಸ್ಕ್ವೇರ್ ಬೋರ್ಡ್ ನಲ್ಲಿ ಬರೆಯಿಸಲಾಗಿದ್ದು, ಈ ಮೂಲಕ ಬಿಗ್ ಬಾಸ್ ಮನೆಯಿಂದ ಗೆದ್ದು ಬನ್ನಿ ಎಂದು ಹಾರೈಸಲಾಗಿದೆ. ಈ ಹಿಂದೆ ಸಾಕಷ್ಟು ನಟ ನಟಿಯರ ಹಾಗೂ ಸಿನಿಮಾಗಳ ಪ್ರಚಾರವನ್ನು ಈ ಬೋರ್ಡ್ ಮೇಲೆ ಮಾಡಿದ್ದರೂ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ.

Tanisha Kuppunda 3

ಟೈಮ್ಸ್ ಸ್ಕ್ವೇರ್ ಜಗತ್ತಿನ ಅತ್ಯಂತ ಜನಪ್ರಿಯ ಸ್ಥಳ. ಅಂದಾಜಿನ ಪ್ರಕಾರ 39.20 ದಶಲಕ್ಷ ಜನರು ಈ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಭೋಜನ ಪ್ರಿಯರಿಗೆ ಅತ್ಯಂತ ಹೇಳಿ ಮಾಡಿಸಿದ ತಾಣವೂ ಇದಾಗಿದೆ. ನ್ಯೂಯಾರ್ಕ್ ನ ಈ ಟೈಮ್ಸ್ ಸ್ಕ್ವೇರ್ ಕುರಿತಾಗಿ ಸಾಕಷ್ಟು ಪುಸ್ತಕಗಳು ಮತ್ತು ಕಾದಂಬರಿಗಳು ಬಂದಿರುವುದು ಈ ಜಾಗದ ಮತ್ತೊಂದು ವಿಶೇಷ.

ನ್ಯೂಯಾರ್ಕ್‌ನ ಮ್ಯಾನ್ ಹ್ಯಾಟನ್ ನಗರದ ಕೇಂದ್ರ ದ್ವೀಪ. ಇಲ್ಲಿನ 42ನೇ ಸ್ಟ್ರೀಟ್‍ ನ ಸುತ್ತಮುತ್ತಲಿನ ಪ್ರದೇಶವನ್ನು ಟೈಮ್ಸ್ ಸ್ಕ್ವೇರ್ ಎಂದು ಕರೆಯಲಾಗುತ್ತಿದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್ ಗಳಿವೆ.

Web Stories

Share This Article