Bigg Boss: ಲವ್‌ ಸ್ಟೋರಿ ಬಗ್ಗೆ ಬಾಯ್ಬಿಟ್ಟ ‘ಚಾರ್ಲಿ’ ಬೆಡಗಿ

Public TV
2 Min Read
sangeetha sringeri 5

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಸಂಗೀತಾ- ಕಾರ್ತಿಕ್ (Karthik Mahesh) ನಾವಿಬ್ಬರೂ ಫ್ರೆಂಡ್ಸ್ ಅಂತಲೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಇವರಿಬ್ಬರ ಲವ್ವಿ-ಡವ್ವಿ ನೋಡಿದ್ರೆ ದೊಡ್ಮನೆಯಲ್ಲಿ ಎಲ್ಲರಿಗೂ ಇಬ್ಬರ ನಡುವೆ ಏನೋ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಅಂತಲೇ ಭಾವಿಸಿದ್ದಾರೆ. ಈ ನಡುವೆ ಭಾಗ್ಯಶ್ರೀ ಅವರು ಸಂಗೀತಾಗೆ ಮದುವೆ ಪ್ಲ್ಯಾನ್ ಏನಿದೆ ಅಂತ ಕೇಳಿದ್ದಾರೆ.

sangeetha 1ದೊಡ್ಮನೆಗೆ ‘ಚಾರ್ಲಿ’ ನಟಿ ಎಂಟ್ರಿ ಕೊಟ್ಟ ಮೇಲೆ ಕ್ರಶ್ ಕ್ವೀನ್ ಆಗಿ ಹೈಲೆಟ್ ಆಗಿದ್ದಾರೆ. ಮನೆಯೊಳಗೆ, ಮನೆ ಹೊರಗೆ ಎರಡು ಕಡೆ ನಟಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಭಾಗ್ಯಶ್ರೀ ಅವರಿಗೆ ಮನೆ ಹೊರಗಿನ ಬಾಯ್‌ಫ್ರೆಂಡ್ ಬಗ್ಗೆ ಸಂಗೀತಾ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಿಮಗೆ ಯಾರಾದರೂ ಪ್ರಪೋಸ್ ಮಾಡಿಲ್ಲವೇ ಫ್ರೆಂಡ್‌ಶಿಪ್ ಆದ ಕೂಡಲೇ ಮದುವೆಗೆ ಒಪ್ಪುತ್ತೀರಾ? ಅಂತ ಭಾಗ್ಯಶ್ರೀ (Bhagyashree) ಅವರು ಸಂಗೀತಾಗೆ (Sangeetha Sringeri) ಕೇಳಿದ್ದಾರೆ.

sangeetha sringeri 1 3ಆಗ ಸಂಗೀತಾ, ನನಗೆ ಕೆಲವರು ಇಷ್ಟ ಆಗಿದ್ದಾರೆ. ಆದರೆ ಡೀಪ್ ಆಗಿ ಕನೆಕ್ಟ್ ಆಗಿಲ್ಲ. ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಆದರೆ ಅವರೆಲ್ಲ ಬೇರೆ ಯಾರಿಗೋ ಪ್ರೇಮ ನಿವೇದನೆ ಮಾಡಿರಬಹುದು ಅಂತ ಅನಿಸತ್ತೆ. ಅವರಿಗೆ ಪ್ರೀತಿ ಇದ್ದರೆ ಪರಸ್ಪರ ಗೊತ್ತಾಗತ್ತೆ. ನಾನು ಮದುವೆ ಆಗಲ್ಲ. ನನಗೆ ಮೊದಲು ಫ್ರೆಂಡ್‌ಶಿಪ್ ವರ್ಕ್ ಆಗಬೇಕು. ಬಾಂಡಿಂಗ್ ವರ್ಕ್ ಆಗಬೇಕು. ಆ ಮೇಲೆ ಮದುವೆ (Wedding) ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

sangeetha 1 3ಈ ಕಡೆ, ಸಂಗೀತಾ ದೀದಿ ಅವರಿಗೆ ನಾನು ಹುಡುಗನನ್ನು ನೋಡಿದ್ದೀನಿ, ಮದುವೆ ಮಾಡಲಾ ಅಂತ ಕಾರ್ತಿಕ್ ಅವರಿಗೆ ಪ್ರತಾಪ್ ಪ್ರಶ್ನೆ ಮಾಡಿದ್ದರು. ಆಗ ಸಂಗೀತಾ ಅವರು ನನಗೆ ಬೆಸ್ಟ್ ಫ್ರೆಂಡ್ಸ್, ನನ್ನ ಕಡೆಯಿಂದ ಏನೂ ಇಲ್ಲ. ಫ್ರೆಂಡ್ ಆಗಿ ಅವಳು ನನಗೆ ಇಷ್ಟ ಎಂದು ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ

karthik mahesh 1ಇನ್ನು ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿರುವ ವಸ್ತುವೊಂದರ ಮೇಲೆ ಪಾರ್ಟನರ್ ಬಗ್ಗೆ ಬರೆದಿದ್ದರಂತೆ. ಇದು ಕಾರ್ತಿಕ್ ಕಣ್ಣಿಗೆ ಬಿದ್ದಿದೆ. ಆಗ ಸಂಗೀತಾ ಅವರು ಪಾರ್ಟನರ್ ಬಗ್ಗೆ ಮಾತನಾಡಿದ್ದಾರೆ. ವೈ ಅಂತ ಸಂಗೀತಾ ಅವರು ಬರೆದಿದ್ದಾರಂತೆ. ನಾನು ಬರೆದಿಲ್ಲ ಅಂತ ಸಂಗೀತಾ ಹೇಳುತ್ತಿದ್ದರು. ಆದರೂ ಕಾರ್ತಿಕ್ ಅವರು ಪ್ರಶ್ನೆ ಮಾಡಿದಾಗ ಸಂಗೀತಾ ಅವರು ಒಬ್ಬ ಹುಡುಗ ಒಬ್ಬ ಹುಡುಗಿ ಹತ್ತಿರ ಮಾತ್ರ ಒಪನ್ ಅಪ್ ಆಗೋಕೆ ಸಾಧ್ಯ. ಹುಡುಗನ ಆ ಆಂಗಲ್‌ನ್ನು ಯಾರೂ ನೋಡಿರಲ್ಲ. ಹುಡುಗನ ಮುಗ್ಧ ಭಾವ ಆ ಹುಡುಗಿ ಬಿಟ್ಟರೆ ಬೇರೆ ಯಾರ ಜೊತೆಯೂ ಇರಲ್ಲ ಎಂದು ಹೇಳಿದ್ದಾರೆ.

ನಮ್ಮಿಬ್ಬರ ನಡುವೆ ಏನಿಲ್ಲ ಎಂದೂ ಹೇಳಿದ್ದರೂ ಕೂಡ ಸಂಗೀತಾ ಪರ ಕಾರ್ತಿಕ್ ನಿಲ್ಲೋದು. ಕಾರ್ತಿಕ್ ಕಷ್ಟಕ್ಕೆ ‘ಚಾರ್ಲಿ’ ನಟಿ ಜೊತೆಯಾಗೋದು ನೋಡಿದ್ರೆ, ಅರವಿಂದ್-ದಿವ್ಯಾ ಉರುಡುಗ (Divya Uruduga) ನಂತರ ಇವರಿಬ್ಬರು ಕೂಡ ರಿಯಲ್ ಜೋಡಿಯಾಗೋದು ಗ್ಯಾರಂಟಿ ಅಂತ ಹೇಳ್ತಿದ್ದಾರೆ ನೆಟ್ಟಿಗರು. ಈ ಎಲ್ಲಾ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Share This Article