ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ- ಮಹಾರಾಷ್ಟ್ರದ ಬಸ್ ಕರ್ನಾಟಕಕ್ಕೂ ಬರುತ್ತೆ: ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

Public TV
2 Min Read
Ramalinga Reddy

ವಿಜಯಪುರ: ಕರ್ನಾಟಕದ (Karnataka) ಬಸ್‌ಗೆ (Bus) ಬೆಂಕಿ (Fire) ಹಾಕೋದಕ್ಕೂ, ಮಹಾರಾಷ್ಟ್ರದ (Maharashtra) ಹೋರಾಟಕ್ಕೂ ಸಂಬಂಧ ಇಲ್ಲ. ನಮ್ಮ ಬಸ್‌ಗೆ ಬೆಂಕಿ ಹಾಕಿದ ಕೃತ್ಯ ಸರಿ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಮರಾಠ ಪುಂಡರು ಬೆಂಕಿ ಹಚ್ಚಿದ ಪ್ರಕರಣಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಸರ್ಕಾರ ಇದನ್ನು ಖಂಡಿಸಬೇಕು. ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಬಸ್‌ಗಳು ನಮ್ಮ ಕರ್ನಾಟಕಕ್ಕೂ ಬರುತ್ತವೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದರು.

BUS FIRE

ಮಹಾರಾಷ್ಟ್ರದ ಬಸ್‌ಗಳು ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೂ ಹೋಗುತ್ತವೆ ಅಲ್ವಾ? ನಮಗೂ ಅವರಿಗೂ ಜಗಳ ಇಲ್ಲ. ಮಹಾರಾಷ್ಟ್ರದ ಹೋರಾಟಕ್ಕೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಅವರ ಆಂತರಿಕ ವಿಚಾರಕ್ಕೂ ಕರ್ನಾಟಕದ ಬಸ್‌ಗೆ ಬೆಂಕಿ ಹಾಕೋದಕ್ಕೂ ಸಂಬಂಧವೇ ಇಲ್ಲ. ಹೋರಾಟ ಮಾಡುವವರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಮೊದಲು ವಿಪಕ್ಷ ನಾಯಕ ಮಾಡಿಕೊಳ್ಳಲು ಹೇಳಿ. ಬಿಜೆಪಿ ಸೋತು ಸುಣ್ಣವಾಗಿ ಹೋಗಿದೆ ಎಂದು ಮಾತಲ್ಲೆ ಬಿಜೆಪಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡ ಈಗ ಸಿಎಂ

ಸತೀಶ್ ಜಾರಕಿಹೊಳಿ ದುಬೈ ಪ್ರವಾಸದ ಬಗ್ಗೆ ಮಾತನಾಡಿದ ಅವರು, ದುಬೈ ಇಲ್ಲ, ಯಾವ್ದೂ ಇಲ್ಲ. ಸರ್ಕಾರ 10 ವರ್ಷ ಇರುತ್ತೆ ಎಂದರು. ರಾಮನಗರ ಉಸ್ತುವಾರಿ ಬಗ್ಗೆ ಅಸಮಧಾನ ವಿಚಾರಕ್ಕೆ ಮಾತನಾಡಿ, ಯಾವುದೇ ಅಸಮಾಧಾನ ಇಲ್ಲ. ಏನೂ ತೊಂದರೆ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಮಾಡಲ್ಲ ಎಂದರು.

ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಈಗ. ಇದೆಲ್ಲ ಮಾಧ್ಯಮ ಸೃಷ್ಟಿ. ಮಾಧ್ಯಮದವರು ಕೇಳುತ್ತಾರೆ ಅಂತ ಅವರು ಏನೋ ಹೇಳ್ತಾರೆ ಎಂದರು. ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬದಲಾವಣೆ ಮಾಡುತ್ತೇವೆ ಎಂದು ಪಾಪ ಬಿಜೆಪಿಯವರು ಕನಸು ಕಾಣ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಕಾಲೆಳೆದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article