ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 2 ವರ್ಷಗಳು ಉರುಳಿವೆ. ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ನೆರವೇರಿತ್ತು. ಇದೀಗ ಅಪ್ಪು ಸ್ಮಾರಕಕ್ಕೆ ಶಿವಣ್ಣ (Shiva Rajkumar) ದಂಪತಿ ಭೇಟಿ ನೀಡಿದ್ದಾರೆ. ಈ ವೇಳೆ ಪುನೀತ್ ಬಗ್ಗೆ ಶಿವಣ್ಣ ಭಾವುಕರಾಗಿದ್ದಾರೆ.

ನಮ್ಮ ಅಪ್ಪನಿಗಿಂತ ಡಬಲ್ ಹೆಸರು ಪುನೀತ್ ಸಂಪಾದಿಸಿದ್ದಾರೆ. ಅಭಿಮಾನಿಗಳಿಗೆ ಅಪ್ಪು ಮೇಲಿರೋ ಪ್ರೀತಿ, ವಿಶ್ವಾಸ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತದೆ. ಅದನ್ನ ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಶಿವರಾಜ್‌ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ:ಖ್ಯಾತ ಕಬ್ಬಡಿ ಆಟಗಾರ ‘ಅರ್ಜುನ್ ಚಕ್ರವರ್ತಿ’ ಬಯೋಪಿಕ್ ಸಿನಿಮಾದ ಫಸ್ಟ್ ಲುಕ್ ಔಟ್
ಕಂಠೀರವ ಸ್ಟುಡಿಯೋಗೆ ಆಗಮಿಸಿದ ಶಿವಣ್ಣ ದಂಪತಿ, ಮೊದಲು ತಂದೆ-ತಾಯಿ ಸಮಾಧಿಗೆ ನಮಸ್ಕರಿಸಿ ಬಳಿಕ ಅಪ್ಪು ಸಮಾಧಿಗೆ ನಮಿಸಿದರು. ಈ ವೇಳೆ, ಶಿವಣ್ಣ ನೋಡಲು ಅಭಿಮಾನಿಗಳ ದಂಡೇ ಭಾಗಿಯಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.

