ಪುನೀತ್ ಪುಣ್ಯ ಸ್ಮರಣೆಯಂದು (ಅ.29) ಅಪ್ಪು(Appu) ಸಮಾಧಿಗೆ ‘ಕಾಂತಾರ’ (Kantara) ನಟಿ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದ ಮೇಲೆ ಪುನೀತ್ (Puneeth Rajkumar) ಅವರನ್ನ ಎಂದೂ ನಾನು ಭೇಟಿಯಾಗಿಲ್ಲ ಎಂಬ ಈ ಬಗ್ಗೆ ಕೊರಗಿದೆ. ಆದರೆ ನನ್ನ ಮೊದಲ ಚಿತ್ರಕ್ಕೆ ಅವರೇ ಮೊದಲು ವಿಶ್ ಬೈಟ್ ನೀಡಿದ್ರು ಎಂದು ಪುನೀತ್ ಅವರನ್ನ ನಟಿ ಸ್ಮರಿಸಿದ್ದಾರೆ.
ಅಪ್ಪು ಸರ್ ಅವರು ತೀರಿಕೊಂಡು 2 ವರ್ಷವಾಗಿದ್ರೂ ಪ್ರತಿ ದಿನ ಅವರನ್ನು ಸ್ಮರಿಸುತ್ತೇವೆ. ಪ್ರತಿ ಸಿನಿಮಾವನ್ನು ಪುನೀತ್ ಅವರಿಗೆ ಅರ್ಪಣೆ ಮಾಡುತ್ತೇವೆ. ಯುವ ಸಿನಿಮಾ ಶುರುವಾಗಿದೆ ಸಂತೋಷ್ ಆನಂದ್ ರಾಮ್ ಅವರ ಜೊತೆ. ನಮ್ಮ ಇಡೀ ತಂಡ ಇಂದು ಇಲ್ಲಿಗೆ ಬಂದಿದ್ದೇವೆ. ಯುವರಾಜ್ ಕುಮಾರ್ ಅವರ ಚಿಕ್ಕಪ್ಪ ಅವರಿಗೆ ಎಷ್ಟು ಸ್ಪೆಷಲ್. ಹಾಗೆಯೇ ನಮ್ಮ ಇಡೀ ತಂಡಕ್ಕೆ ಪುನೀತ್ ಅವರು ತುಂಬಾ ಸ್ಪೆಷಲ್ ಎಂದು ಸಪ್ತಮಿ (Saptami Gowda) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಪ್ಪು ಸರ್ ಅವರ ಹಾರೈಕೆ ನಮ್ಮ ಸಿನಿಮಾ ಮತ್ತು ಇಡೀ ಚಿತ್ರರಂಗದ ಮೇಲಿದೆ. ಅವರು ಇವತ್ತು ನಮ್ಮ ಜೊತೆ ಇಲ್ಲದೇ ಇರೋದು ನಮಗೆ ದೊಡ್ಡ ಲಾಸ್ ಎಂದಿದ್ದಾರೆ. ಅವರ ಮೇಲಿನ ಅಭಿಮಾನಿಗಳ ಪ್ರೀತಿ ನೋಡಿದ್ರೆ ಖುಷಿಯಾಗುತ್ತದೆ. ಈ ದಿನ ನೇತ್ರದಾನ, ರಕ್ತದಾನ ಅವರ ಮೇಲಿನ ಪ್ರೀತಿಗಾಗಿ ಅಭಿಮಾನಿಗಳು ಮಾಡುತ್ತಾರೆ. ಆ ವ್ಯಕ್ತಿ ಹೋಗಿದ್ರೂ, ಅವರ ಒಳ್ಳೆತನ ಇನ್ನೂ ನಡೀತಾ ಬಂದಿದೆ ಎಂದಿದ್ದಾರೆ.
ನಾನು ಅವರನ್ನ ಚಿಕ್ಕ ವಯಸ್ಸಿನಲ್ಲಿ ಭೇಟಿಯಾಗಿದ್ದೆ. ಆದರೆ ಚಿತ್ರರಂಗಕ್ಕೆ ಬಂದ ಮೇಲೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಬೇಜಾರಿದೆ. ನನ್ನ ಮೊದಲ ಚಿತ್ರ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಅವರೇ ಮೊದಲು ಸೆಲೆಬ್ರಿಟಿ ಬೈಟ್ ನೀಡಿದ್ದು ಅಪ್ಪು ಸರ್. ಯುವ ಅವರಲ್ಲಿ ಅಪ್ಪು ಇದ್ದೇ ಇದ್ದಾರೆ. 100% ಇದ್ದಾರೆ. ಯುವ (Yuva Rajkumar) ಅವರ ನಡೆ, ನುಡಿಯಲ್ಲಿ ಅಪ್ಪು ಸರ್ ಇದ್ದಾರೆ ಎಂದು ಸಪ್ತಮಿ ಸಹನಟ ಯುವ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ- ಲಕ್ಷ್ಮಿ ಗೋವಿಂದರಾಜು ಭಾವುಕ
ಇಡೀ ಕುಟುಂಬ ಮತ್ತು ಎಲ್ಲಾ ವರ್ಗದ ಜನ ಕುಳಿತು ನೋಡುವಂತಹ ಸಿನಿಮಾ ಯುವ. ನಿಜವಾಗಲೂ ಈ ಚಿತ್ರ ಆದ್ಮೇಲೆ ಎಲ್ಲರಿಗೂ ಇಷ್ಟ ಆಗುತ್ತೆ. ಮಾರ್ಚ್ 28ಕ್ಕೆ ‘ಯುವ’ (Yuva) ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರದ ಬಗ್ಗೆ ಸಪ್ತಮಿ ಮಾತನಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]