ಇಟಲಿ ಮೂಲದವರಿಗೆ ಪ್ರಧಾನಿ ಮೋದಿ ಕೆಲಸ ಅರ್ಥವಾಗಲ್ಲ: ಅಮಿತ್‌ ಶಾ

Public TV
2 Min Read
amit shah

ಭೋಪಾಲ್: ಇಟಲಿ ಮೂಲದವರಿಗೆ ಪ್ರಧಾನಿ ಮೋದಿ (Narendra Modi) ಅವರು ಮಾಡಿರುವ ಅಭಿವೃದ್ಧಿ ಕೆಲಸ ಅರ್ಥವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಮಧ್ಯಪ್ರದೇಶದ (Madhya Pradesh) ಛಿಂದ್ವಾರಾ ಜಿಲ್ಲೆಯ ಜುನ್ನಾಡಿಯೊದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಜನರು ಅಭಿವೃದ್ಧಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಇಟಲಿ ಮೂಲದವರಿಗೆ (ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ) ಇದು ಅರ್ಥವಾಗುವುದಿಲ್ಲ ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

rahul gndhi Priyanka Gandhi Vadra

ಸಹೋದರ ಮತ್ತು ಸಹೋದರಿ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ತಿರುಗುತ್ತಿರುವಾಗ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ಆದರೆ ಅವರಿಗೆ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ಮೂಲ ಇಟಲಿಯಲ್ಲಿದೆ. ಭಾರತದಲ್ಲಿ ಅವರ ಮೂಲವನ್ನು ಹೊಂದಿರುವವರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ಅಯೋಧ್ಯೆಯಲ್ಲಿ ದೇವಸ್ಥಾನದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ ಅದರ ದಿನಾಂಕವನ್ನು ಹೇಳುವುದಿಲ್ಲ ಎಂದು ರಾಹುಲ್ ಬಾಬಾ ಟೀಕಿಸುತ್ತಿದ್ದರು. ಈಗ ನೋಡಿ, ಮೋದಿಜಿ ಅವರು ಮಂದಿರವನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಉದ್ಘಾಟನೆ ದಿನಾಂಕವನ್ನೂ ಹೇಳಿದ್ದಾರೆ. ಅಲ್ಲಿಗೆ ಹೋಗಿ ಆಶೀರ್ವಾದ ಪಡೆದು ಸಂತೃಪ್ತಿ ಪಡೆಯಿರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾನುವಾರ ದುಬೈನಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ

NARENDRA MODI P20 SUMMIT

ರಾಮಮಂದಿರ ನಿರ್ಮಾಣ ಮಾತ್ರವಲ್ಲ, ಮೋದಿಯವರು 370 ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ (ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದು). ತ್ರಿವಳಿ ತಲಾಖ್ ರದ್ದುಗೊಳಿಸಿದ್ದಾರೆ. ವೈಮಾನಿಕ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದಾರೆ. ಚಂದ್ರಯಾನ-3 ಯಶಸ್ಸಿಗೆ ಕೊಡುಗೆ ನೀಡಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ 33% ಮೀಸಲಾತಿ ಒದಗಿಸಿದ್ದಾರೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ವಿಶ್ವವೇ ಭಾರತದ ಬೆಳವಣಿಗೆಯನ್ನು ಕೊಂಡಾಡುತ್ತಿರುವಾಗ, ಕಾಂಗ್ರೆಸ್‌ಗೆ ದೇಶದಲ್ಲಿ ಯಾವುದೇ ಸಕಾರಾತ್ಮಕತೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.

Web Stories

Share This Article