ನವೆಂಬರ್ 1ಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಯಶ್?: ಟೈಟಲ್-ಟೀಸರ್ ರಿಲೀಸ್

Public TV
1 Min Read
yash 2 1

ವೆಂಬರ್ (November) ಒಂದಕ್ಕೆ ಯಶ್ (Yash) ನಟನೆಯ ಹೊಸ ಸಿನಿಮಾದ (New Movie) ಅಪ್ ಡೇಟ್ ಸಿಗಲಿದೆ ಎನ್ನುವ ಮತ್ತೊಂದು ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಚಿತ್ರದ ಟೈಟಲ್ (Title) ಮತ್ತು ಟೀಸರ್ ಅನ್ನು ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.

Yash

ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ನವೆಂಬರ್ 1ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

Yash 2

ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

yash 1 1

ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

 

ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article