ಸುಧೀರ್ ಅತ್ತಾರ್ (Sudhir Attar) ನಿರ್ದೇಶನದ ‘ಕೊರಗಜ್ಜ’ (Koragajja) ಸಿನಿಮಾದ ಶೂಟಿಂಗ್ ವೇಳೆ ಲಾಂಗ್ ಹಿಡಿದುಕೊಂಡು ಗೂಂಡಾಗಳು ಎಂಟ್ರಿ ಕೊಟ್ಟಿದ್ದಾರೆ. ಶುಭಾ ಪೂಂಜಾ ಮತ್ತು ಬಾಲಿವುಡ್ ನ ಖ್ಯಾತ ಡಾನ್ಸ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಲ್ವಾರ್ ಹಿಡಿದುಕೊಂಡು ನುಗ್ಗಿದ ತಂಡವು ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದೆ.
ಕುದುರೆಮುಖ ಸಮೀಪದ ಕಳಸದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಹಾಡಿನಲ್ಲಿ ಶುಭಾ ಪೂಂಜಾ ಕಾಣಿಸಿಕೊಳ್ಳುತ್ತಿದ್ದರೆ, ಗಣೇಶ್ ಆಚಾರ್ಯ (Ganesh Acharya) ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ತಲ್ವಾರ್ ಹಿಡಿದುಕೊಂಡು ಗುಂಪು ನುಗ್ಗಿದೆ. ಈ ಸಿನಿಮಾ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ. ಹೀಗೆ ಅನೇಕ ಬಾರಿಯೂ ಅಲ್ಲಲ್ಲಿ ಇಂತಹ ತೊಂದರೆಗಳನ್ನು ಸಿನಿಮಾ ತಂಡ ಎದುರಿಸುತ್ತಿದೆ.
ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi) ಪಬ್ಲಿಕ್ ಟಿವಿ ಡಿಜಿಟೆಲ್ ಜೊತೆ ಮಾತನಾಡಿ, ‘ಕೊರಗಜ್ಜ ಸಿನಿಮಾ ಮಾಡಬಾರದು ಎನ್ನುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ. ದೈವ ನರ್ತಕರು ಎಂದು ಹೇಳಿಕೊಂಡು ಬಂದು ಇಂತಹ ಗಲಾಟೆಯನ್ನು ಮಾಡುತ್ತಿದ್ದಾರೆ. ಮೊನ್ನೆಯೂ ಅದೇ ಆಗಿದೆ. ಸಿನಿಮಾ ಟೀಮ್ ಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಸೆಟ್ ಹಾಳಾಗಿದೆ. ಕೊರಗಜ್ಜನ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದರೆ ಹೇಗೆ?’ ಅಂತಾರೆ.
ಕೇವಲ ಕಳಸದಲ್ಲಿ ಮಾತ್ರವಲ್ಲ, ಅನೇಕ ಕಡೆಗಳಲ್ಲೂ ಇಂತಹ ತೊಂದರೆಗಳನ್ನು ಎದುರಿಸಿದೆ ಅಂತೆ ಚಿತ್ರತಂಡ. ಎಲ್ಲವನ್ನೂ ನಿಭಾಯಿಸಿಕೊಂಡು ಚಿತ್ರೀಕರಣಕ್ಕೆ ಮುಂದುವರೆಸಿದೆ. ಹಲವು ವರ್ಷಗಳ ನಂತರ ಮತ್ತೆ ಸುಧೀರ್ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಕಬೀರ್ ಬೇಡಿ, ಶ್ರುತಿ, ಭವ್ಯ ಸೇರಿದಂತೆ ನುರಿತ ತಾರಾ ಬಳಗವೇ ಈ ಸಿನಿಮಾದಲ್ಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]