ಬೆಂಗಳೂರು: ಈ ಬಾರಿ ಆಪರೇಷನ್ ಮಾಡಲು ಬಿಜೆಪಿಯವರು (BJP Operation) ಹೋದ್ರೆ ಅವರ ಹೊಟ್ಟೆಯಲ್ಲೇ ಕತ್ತರಿ ಸಿಕ್ಕಿಕೊಳ್ಳುತ್ತೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ (BJP-Congress) ಶಾಸಕರ ಆಪರೇಷನ್ ನಡೆಯುತ್ತಿದೆ ಎಂಬ ಶಾಸಕ ಗಾಣಿಗ ರವಿ ಆರೋಪ ವಿಚಾರಕ್ಕೆ ವಿಕಾಸ ಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಎಲ್ಲವೂ ಈ ಬಾರಿ ಆಗೋದಿಲ್ಲ. ಈ ಬಾರಿ ಆಪರೇಷನ್ ಮಾಡೋಕೆ ಹೋದ್ರೆ ಬಿಜೆಪಿ ಅವರ ಹೊಟ್ಟೆಯಲ್ಲೇ ಕತ್ತರಿ ಸಿಕ್ಕಿಕೊಳ್ಳುತ್ತೆ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್ ಕೇಸ್ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು
ಬಿಜೆಪಿಯವರಿಗೆ ಆಪರೇಷನ್ ಮಾಡೋ ಹ್ಯಾಬಿಟ್ ಇದೆ. ಬಿಜೆಪಿಯವರಿಗೆ ಯಾವತ್ತೂ ಪೂರ್ಣ ಬಹುಮತ ಬಂದಿಲ್ಲ. ಪೂರ್ಣ ಬಹುಮತ ಪಡೆಯದೇ ಹೋದರೂ ಎರಡು ಬಾರಿ ಸರ್ಕಾರ ಮಾಡಿದ್ದಾರೆ. ಒಮ್ಮೆ ನಾನೇ ಬಿಜೆಪಿ ಸರ್ಕಾರ ಬರಲು ಸಹಕಾರ ಕೊಟ್ಟಿದ್ದೆ. ಸಹಾಯ ಮಾಡಿದ ನನ್ನನ್ನೇ ನಡು ನೀರಿನಲ್ಲಿ ಕೈ ಬಿಟ್ಟರು. ಬಿಜೆಪಿಯವರಿಗೆ ಸಹಾಯ ಮಾಡಿದವರನ್ನ ನಡು ನೀರಿನಲ್ಲಿ ಬಿಡೋ ಬುದ್ಧಿ ಇದೆ. ಈ ಬಾರಿ ನಮಗೆ 135 ಸ್ಥಾನ ಬಂದಿದೆ. ನಮ್ಮ ಸರ್ಕಾರಕ್ಕೆ ಏನೂ ಆಗೊಲ್ಲ. ಜನರ ಹಾದಿ ತಪ್ಪಿಸೋಕೆ ಬಿಜೆಪಿಯವರು ಏನೇನೋ ಹೇಳ್ತಾರೆ ಅಷ್ಟೆ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ನಮ್ಮ ನಾಯಕ ಡಿಕೆಶಿ ಸಿಎಂ ಆಗ್ತಾರೆ, 70 ಶಾಸಕರ ಬೆಂಬಲವಿದೆ: ಶಿವಗಂಗಾ ಬಸವರಾಜ್ ಬಾಂಬ್
ಎರಡೂವರೆ ವರ್ಷ ಆದ ಮೇಲೆ ಸಿಎಂ ಬದಲಾವಣೆ ಆಗ್ತಾರೆ ಎಂಬ ಶಾಸಕ ಗಾಣಿಗ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ಡಿಸಿಎಂ ಮಾಡೋದು ಹೈಕಮಾಂಡ್, ಅ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA
Web Stories