National Games: 37ನೇ ಆವೃತ್ತಿಯ ನ್ಯಾಷನಲ್‌ ಗೇಮ್ಸ್‌ಗೆ ಮೋದಿ ಅದ್ಧೂರಿ ಚಾಲನೆ

Public TV
2 Min Read
Modi 3

ಪಣಜಿ: 37ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಗೋವಾದಲ್ಲಿ ಇದೇ ಮೊದಲಬಾರಿಗೆ ಕ್ರೀಡಾಕೂಟ ನಡೆಯುತ್ತಿದ್ದು, ಅದ್ಧೂರಿ ಚಾಲನೆ ದೊರೆತಿದೆ. 36ನೇ ನ್ಯಾಷನಲ್‌ ಗೇಮ್ಸ್ ಕ್ರೀಡಾಕೂಟ ಗೋವಾದಲ್ಲಿ ನಡೆಯಬೇಕಿತ್ತು. ಆದ್ರೆ ಕೋವಿಡ್‌ ಕಾರಣಗಳಿಂದಾಗಿ ಗುಜರಾತ್‌ಗೆ ಕ್ರೀಡಾಕೂಟವನ್ನು ಸ್ಥಳಾಂತರಿಸಲಾಗಿತ್ತು.

ಇದೇ ಮೊದಲಬಾರಿಗೆ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ ಅಕ್ಟೋಬರ್‌ 26 ರಿಂದ ನವೆಂಬರ್‌ 9ರ ವರೆಗೆ ನಡೆಯಲಿದೆ. ಗೋವಾದ 5 ನಗರಗಳು (ಮಾಪುಸಾ, ಮಾರ್ಗೋ, ಪಂಜಿಮ್, ಪೋಂಡಾ ಮತ್ತು ವಾಸ್ಕೋ), 28 ಸ್ಥಳಗಳು ಹಾಗೂ 43 ಕ್ರೀಡಾ ವಿಭಾಗಗಳಲ್ಲಿ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಟ್ರ್ಯಾಕ್ ಸೈಕ್ಲಿಂಗ್ ಈವೆಂಟ್‌ ಮತ್ತು ಗಾಲ್ಫ್ ಮಾತ್ರ ಗೋವಾದ ಹೊರಗೆ ದೆಹಲಿಯಲ್ಲಿ ನಡೆಯಲಿದೆ.

1924ರಲ್ಲಿ ಅವಿಭಜಿತ ಭಾರತದ ಲಾಹೋರ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಗಿತ್ತು. ಅಲ್ಲಿಂದ 1938ರ ವರೆಗೆ ಭಾರತೀಯ ಒಲಿಂಪಿಕ್ಸ್‌ ಕ್ರೀಡಾಕೂಟ ಎಂದೇ ಇದನ್ನು ಕರೆಯಲಾಗುತ್ತಿತ್ತು. ಸದ್ಯ ಗೋವಾದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಕಳೆದ ಆವೃತ್ತಿಗಿಂತಲೂ ಸುಮಾರು 3,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಒಳಗೊಂಡಿರುವ 43 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಾಂಸ್ಕೃತಿಕ ಸಂಕೇತವಾದ ಕುಂಬಿ ಶಾಲು ಹೊದಿಸಿ ಸನ್ಮಾನಿಸಿದರು.

Modi 2

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಆಡಳಿತಗಳು ಕ್ರೀಡೆಯನ್ನು ಕಡೆಗಣಿಸಿದ್ದವು. ಆದ್ರೆ ಈಗಿನ ಭಾರತ ಕ್ರೀಡೆಗೆ ಪೂರಕ ವಾತಾವರಣ ಕಲ್ಪಿಸುವ ಮೂಲಕ ದಾಪುಗಾಲಿಡುತ್ತಿದೆ. ಈ ವರ್ಷದ ಕ್ರೀಡೆಗೆ ಮೀಸಲಾಗಿಟ್ಟಿರುವ ಬಜೆಟ್‌ ಕಳೆದ 9 ವರ್ಷಗಳ ಹಿಂದೆ ಮಂಡಿಸಿದ್ದಕ್ಕಿಂತ 3 ಪಟ್ಟು ಹೆಚ್ಚಾಗಿದೆ ಎಂದು ಶ್ಲಾಘಿಸಿದ್ದಾರೆ.

ನಮ್ಮ ದೇಶದ ಬೀದಿ ಬೀದಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪ್ರತಿಭೆಗಳು ಅರಳುತ್ತಿವೆ. ವಿಶ್ವಚಾಂಪಿಯನ್‌ಗಳಿಗೆ ಜನ್ಮ ನೀಡಿದ ಅನೇಕರು ಭಾರತೀಯರು. ಹಿಂದೆಲ್ಲಾ ಕ್ರೀಡಾ ಕ್ಷೇತ್ರಗಳಲ್ಲಿ ಪದಕಗಳನ್ನು ನೋಡಿದಾಗ ನಾಚಿಕೆಪಡುವಂತಿತ್ತು. ಆದ್ರೆ ಈಗ ದೇಶವೇ ಹೆಮ್ಮೆಪಡುವಂತ ಸಾಧನೆಗಳು ನಡೆಯುತ್ತಿವೆ. 2014ರ ರಾಷ್ಟ್ರೀಯ ಕ್ರೀಡಾಕೂಟಗಳ ನಂತರ ಮೂಲ ಸೌಕರ್ಯಗಳಲ್ಲಿ ಬದಲಾವಣೆ ತಂದಿದ್ದೇವೆ. ಕ್ರೀಡಾಪಟುಗಳಿಗೆ ಇದ್ದ ಅಡೆತಡೆಗಳನ್ನು ಒಂದೊಂದಾಗಿ ತೆಗೆದುಹಾಕಿದ್ದೇವೆ. ಇದರಿಂದಾಗುವ ಪ್ರಯೋಜನಗಳನ್ನು ಇತ್ತೀಚೆಗೆ ನೋಡುತ್ತಿದ್ದೇವೆ. ಏಷ್ಯನ್ ಗೇಮ್ಸ್, ಏಷ್ಯನ್ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಉದಾಹರಣೆ ಎಂದು ಹೊಗಳಿದ್ದಾರೆ.

ಇಷ್ಟಕ್ಕೆ ನಿಲ್ಲದ ಭಾರತದ ಸಾಧನೆ ಈಗ ಒಲಿಂಪಿಕ್ಸ್‌ ಹಾದಿಯತ್ತ ಸಾಗುತ್ತಿದೆ. 2030ರಲ್ಲಿ ಯುವ ಒಲಿಂಪಿಕ್ಸ್ ಮತ್ತು 2036 ರಲ್ಲಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಸಿದ್ಧತೆ ನಡೆಸುತ್ತಿದೆ ಎಂದು ಮೋದಿ ಮತ್ತೊಮ್ಮೆ ಹೇಳಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article