ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ

Public TV
2 Min Read
Dating App

ನವದೆಹಲಿ: ಡೇಟಿಂಗ್ ಆ್ಯಪ್ (Dating App) ಬಂಬಲ್ (Bumble) ಮೂಲಕ ಸ್ನೇಹ ಬೆಳೆಸಿದ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿರುವ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ದೆಹಲಿ ಪೊಲೀಸರು (Delhi Police) ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ಥ ಮಹಿಳೆಯ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಈ ಘಟನೆಯು ಜನವರಿ 18 ರಂದು ನಡೆದಿದೆ ಎನ್ನಲಾಗಿದ್ದು, ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿ ತನ್ನನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಮಹಿಳೆಯ ಪ್ರಕಾರ ಅವರು ಜನವರಿ 17 ರಂದು ಬಂಬಲ್ ಮೂಲಕ ಆರೋಪಿ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಮರುದಿನ ಆ ವ್ಯಕ್ತಿ ತಡರಾತ್ರಿಯಲ್ಲಿ ಅವಳನ್ನು ಭೇಟಿಯಾಗಲು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಗರ್ಭದಲ್ಲಿರುವುದು ಹೆಣ್ಣು ಮಗು ಎಂದು ತಿಳಿದು ಪತ್ನಿಯನ್ನು ಹತ್ಯೆಗೈದ ಪತಿ

ಆ ದಿನ ಸಂಜೆ ಇಬ್ಬರೂ ಕಾಫಿ ಶಾಪ್‌ನಲ್ಲಿ ಭೇಟಿಯಾದರು. ನಂತರ ಆರೋಪಿ ಮಹಿಳೆಯನ್ನು ಬಸಂತ್ ನಗರ ಪ್ರದೇಶದ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಈ ಸಂಬಂಧ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

ಈ ತಿಂಗಳ ಆರಂಭದಲ್ಲಿ, ಬಂಬಲ್ ಮೂಲಕ ಭೇಟಿಯಾದ ಮಹಿಳೆಯೊಬ್ಬರು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ಗುರುಗ್ರಾಮ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಮಹಿಳೆ ತನ್ನ ಮನೆಗೆ ಬಂದು ತನ್ನ ಮೊಬೈಲ್ ಫೋನ್, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಮತ್ತು ತನಗೆ ಮಾದಕವಸ್ತು ನೀಡಿ 1.78 ಲಕ್ಷ ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾಳೆ ಎಂದು ವ್ಯಕ್ತಿ ಆರೋಪಿಸಿದ್ದ. ಇದನ್ನೂ ಓದಿ: ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article