ಇಸ್ರೇಲ್‌ ಇನ್ನೂ ಯಾಕೆ ಭೂ ದಾಳಿ ನಡೆಸಿಲ್ಲ – ಪ್ರಶ್ನೆಗೆ ಸಿಕ್ಕಿತು ಉತ್ತರ

Public TV
1 Min Read
Why Israel delaying Ground Invasion Of Gaza

ಟೆಲ್‌ ಅವಿವ್‌: ಇಸ್ರೇಲ್‌-ಹಮಾಸ್‌ (Israel-Hamas) ಮಧ್ಯೆ ಯುದ್ಧ ಆರಂಭವಾಗಿ 18 ದಿನಗಳು ಕಳೆದಿದೆ. ಹೀಗಿದ್ದರೂ ಇನ್ನೂ ಯಾಕೆ ಗಾಜಾ ಮೇಲೆ ಭೂ ದಾಳಿ ನಡೆಸಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹಮಾಸ್‌ ದಾಳಿ ನಡೆಸಿದ ನಂತರ ಇಸ್ರೇಲ್‌ ನಿರಂತರವಾಗಿ ಏರ್‌ಸ್ಟ್ರೈಕ್‌ (Air Strike) ಮಾಡಿ ಹಮಾಸ್‌ ನೆಲೆಗಳನ್ನು ಧ್ವಂಸ ಮಾಡುತ್ತಿದೆ. ಕಳೆದ ವಾರದಿಂದ ಏರ್‌ಸ್ಟ್ರೈಕ್‌ ಜೊತೆಗೆ ಭೂ ದಾಳಿಗೆ ಇಸ್ರೇಲ್‌ ಸಜ್ಜಾಗುತ್ತಿದೆ ಎಂಬ ಮಾಹಿತಿಗಳು ಬರುತ್ತಿದ್ದವು. ಆದರೆ ಇನ್ನೂ ಇಸ್ರೇಲ್‌ ಭೂ ದಾಳಿ ನಡೆಸದೇ ಇರುವುದಕ್ಕೆ ವಿಶ್ವಾಸದ ಬಿಕ್ಕಟ್ಟು (Crisis of Confidence) ಕಾರಣವಂತೆ.

ISREAL INDIA

ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತು ಇಸ್ರೇಲ್‌ ಸೇನೆಯ (IDF) ಮಧ್ಯೆ ವಿಶ್ವಾಸದ ಬಿಕ್ಕಟ್ಟು ಇದೆ ಇಸ್ರೇಲ್‌ Yedioth Ahronoth ಪ್ರತಿಕೆಯಲ್ಲಿ ಅಂಕಣಕಾರ ನಹುಮ್ ಬರ್ನಿಯಾ ಎಂಬವರು ಸಂಪಾದಕೀಯ ಬರೆದಿದ್ದಾರೆ.  ಇದನ್ನೂ ಓದಿ: ಹುಲಿ ಉಗುರು ಕಂಟಕ: ದರ್ಶನ್, ಜಗ್ಗೇಶ್, ನಿಖಿಲ್ ಕ್ರಮಕ್ಕೆ ಒತ್ತಾಯ

ಮುಖ್ಯವಾದ ವಿಷಯಗಳ ಬಗ್ಗೆ ಪ್ರಮುಖರು ಒಮ್ಮತದಿಂದ ಒಪ್ಪಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಹಮಾಸ್‌ ಅಕ್ಟೋಬರ್‌ 7ರಂದು ನಡೆಸಿದ ದಾಳಿಯಿಂದಾಗಿ ನೆತನ್ಯಾಹು ಸೇನೆಯ ಜನರಲ್‌ಗಳ ಮೇಲೆ ಬಹಳ ಸಿಟ್ಟಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ದಾಳಿಯ ಮಾಹಿತಿ ಗೊತ್ತಾಗದೇ ಇರುವುದು ಸೇನೆಯ ಗಂಭೀರ ವೈಫಲ್ಯ ಎಂದು ನೆತನ್ಯಾಹು ದೂಷಿಸಿದ್ದಾರೆ ಎಂದು  ಬರಹದಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ನಡುವೆ ಭಿನ್ನಾಭಿಪ್ರಾಯ ಎದ್ದಿದೆ. ದಾಳಿಯ ವೈಫಲ್ಯದ ಬಗ್ಗೆ ಸೇನೆಯ ಪ್ರಧಾನ ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಇಸ್ರೇಲ್‌ ಇನ್ನೂ ಗಾಜಾದ ಮೇಲೆ ಭೂ ದಾಳಿ ನಡೆಸಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article