‘ಬಿಗ್ ಬಾಸ್’ ಮನೆಯಿಂದ ವರ್ತೂರ್ ಸಂತೋಷ್ ಎಕ್ಸಿಟ್ ಹೇಗಿತ್ತು?

Public TV
2 Min Read
Varthoo Santhosh 1

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನಗ್ ನಗ್ತಾ ಇರ್ತಿದ್ದ, ಎಲ್ಲರನ್ನೂ ಕಾಲೆಳೆದುಕೊಂಡು ತಮಾಷೆ ಮಾಡ್ತಿದ್ದ ‘ಹಳ್ಳಿಕಾರ್’ ಖ್ಯಾತಿಯ ವರ್ತೂರ್ ಸಂತೋಷ್ (Varthoo Santhosh) ಅರೆಸ್ಟ್ ಆಗಿದ್ದಾರೆ. ಇಂಥದ್ದೊಂದು ಘಟನೆ ಬಿಗ್ ಬಾಸ್ ಇತಿಹಾಸದಲ್ಲೇ ಈವರೆಗೂ ನಡೆದಿಲ್ಲ. ಬಿಗ್ ಬಾಸ್ ಮನೆ ಒಳಗೆ ಬಂದ ಅರಣ್ಯ ಅಧಿಕಾರಿಗಳು  ನಿನ್ನೆ ರಾತ್ರಿಯೇ ಸಂತೋಷ್‍ ನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಇಂಥದ್ದೊಂದು ಘಟನೆ ನಡೆಯುವುದಕ್ಕೂ ಮುನ್ನ ಸಂತೋಷ್ ಮನೆಮಂದಿಗೆಲ್ಲ ಭವಿಷ್ಯ ಹೇಳುತ್ತಿದ್ದರು.

Varthoo Santhosh 3

ಹೌದು, ದೊಡ್ಮನೆಯ ಇತರ ಸದಸ್ಯರನ್ನು ಬಿಗ್ ಬಾಸ್ ಮನೆಯ ಅಂಗಳದಲ್ಲಿ ಕೂರಿಸಿಕೊಂಡು ಸಂತೋಷ್ ಭವಿಷ್ಯ ಹೇಳುತ್ತಿದ್ದರು. ತುಕಾಲಿ ಸಂತು, ಸಿರಿ, ವಿನಯ್ ಗೌಡ, ನೀತು ಹೀಗೆ ಅನೇಕರು ದುಂಡಾಗಿ ಕುಳಿತುಕೊಂಡು ಸಂತೋಷ್ ಹೇಳುತ್ತಿದ್ದ ಭವಿಷ್ಯವನ್ನು ಕೇಳುತ್ತಿದ್ದರು. ತಮಾಷೆ ತಮಾಷೆಯಾಗಿಯೇ ಮಾತುಕತೆ ನಡೆದಿತ್ತು. ಎಲ್ಲರ ಭವಿಷ್ಯ ಹೇಳುತ್ತಿದ್ದ ಸಂತೋಷ ಮುಂದಿನ ಗಂಟೆಗಳಲ್ಲಿ ತಾವು ಅರೆಸ್ಟ್ (Arrest) ಆಗಲಿದ್ದೇನೆ ಎನ್ನುವುದೇ ಗೊತ್ತಿರಲಿಲ್ಲ.

Varthoo Santhosh 2

ಬಿಗ್ ಬಾಸ್ ಮನೆಯ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸುವುದು ಅಷ್ಟು ಸುಲಭವಲ್ಲ. ಅವರ ಅನಾರೋಗ್ಯ, ರಕ್ತಸಂಬಂಧಿಗಳ ಸಾವು, ಎಲಿಮಿನೇಟ್ ಆದಾಗ ಹಾಗೂ ದೈಹಿಕ ಹಲ್ಲೆಗಳು ನಡೆದಾಗ ಮಾತ್ರ ಮನೆಯಿಂದ ಆಚೆ ಕಳುಹಿಸಲಾಗುತ್ತದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೊಲೀಸ್ ಜೊತೆ ಬಿಗ್ ಬಾಸ್ ಸ್ಪರ್ಧಿಯನ್ನು ಕಳುಹಿಸಿ ಕೊಡಲಾಗಿದೆ. ವರ್ತೂರ್ ಸಂತೋಷ್ ಹುಲಿ ಉಗುರನ್ನು ಧರಿಸಿದ್ದರು ಎನ್ನುವ ಕಾರಣಕ್ಕೆ ಅವರ ಬಂಧನವಾಗಿದೆ. ಸಂತೋಷ್ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ಆನಂತರ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ.

Varthuru Santhosh 1 2

ಸಂತೋಷ್ ಬಂಧನದ ವಿಚಾರವನ್ನೂ ಬಿಗ್ ಬಾಸ್ ಮನೆಯಲ್ಲಿ ಗೌಪ್ಯವಾಗಿ ಇಡಲಾಗಿದೆ. ಮನೆಯವರಿಗೆ ಸಂತೋಷ್ ಇಲ್ಲ ಎನ್ನುವ ವಿಚಾರ ಗೊತ್ತಿದೆ. ಆದರೆ, ಅವರು ಯಾವ ಕಾರಣದಿಂದಾಗಿ ಮನೆಯಿಂದ ಆಚೆ ಹೋಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಮನೆಯವರಿಗೇ ಗೊತ್ತಿಲ್ಲದೇ ಎಲಿಮಿನೇಟ್ ಆಗಿರಬಹುದಾ ಎನ್ನುವ ಚರ್ಚೆ ನಡೆದರೂ ಅಚ್ಚರಿಯಿಲ್ಲ. ಅಥವಾ ಒಂದೊಂದು ಸಲ ಗೌಪ್ಯ ರೂಮ್‍ ನಲ್ಲೂ ಸ್ಪರ್ಧಿಗಳನ್ನು ಇಡುವ ಪರಿಪಾಠವಿದೆ. ಅಲ್ಲಿಗೇನಾದರೂ ಕಳುಹಿಸಿದ್ದಾರಾ ಎನ್ನುವ ಅನುಮಾನ ಕೂಡ ಮೂಡಲಿದೆ.

ಸಂತೋಷ್ ಸದ್ಯ ಬಂಧನದಲ್ಲಿ ಇದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆಯೇ ಕರೆದುಕೊಂಡು ಹೋಗಲಾಗುತ್ತಿದೆ. ನ್ಯಾಯಾಧೀಶರು ತೀರ್ಪು ಏನೇ ನೀಡಿದರೂ, ಇನ್ಮುಂದೆ ಸಂತೋಷ್ ಮತ್ತೆ ಬಿಗ್ ಬಾಸ್ ಮನೆ ಒಳಗೆ ಕಾಲಿಡಲಾರರು. ಹಾಗಾಗಿ ಸಂತೋಷ್ ಈ ವಾರದ ಎಲಿಮಿನೇಟ್‍ ಲಿಸ್ಟ್ ಗೆ ಸೇರಬಹುದು. ಎಲಿಮಿನೇಟ್ ಯಾದಿಗೆ ಸೇರಿದರೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇಫ್ ಆಗಿ ಇರಬಹುದು. ಬಟ್‍, ಬಿಗ್ ಬಾಸ್ ಇನ್ನೇನಾದರೂ ಟ್ವಿಸ್ಟ್ ನೀಡಬಹುದು. ಅದಕ್ಕಾಗಿ ಇನ್ನೊಂದು ವಾರ ಕಾಯಲೇಬೇಕು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article