ಕಾರವಾರ: ಇಸ್ರೇಲ್‌ನಿಂದ (Israel) ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ‘ಆಪರೇಷನ್ ಅಜಯ್’ (Operation Ajay) ತಂಡದಲ್ಲಿ ಕಾರವಾರ (Karwar) ತಾಲೂಕಿನ ಬಿಣಗಾದ ಮಹಿಮಾ ಶೆಟ್ಟಿಯವರು (Mahima Shetty) ಭಾಗವಹಿಸಿ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಶ್ರಮವಹಿಸುವ ಮೂಲಕ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.
ಸದ್ಯ ಗೋವಾದ ಪರ್ವೊರಿಮ್‌ನಲ್ಲಿ ನೆಲೆಸಿರುವ ದುರ್ಗಪ್ಪ ಶೆಟ್ಟಿ ಮತ್ತು ನಯನಾ ದಂಪತಿಯ ಪುತ್ರಿ ಮಹಿಮಾ ಶೆಟ್ಟಿ ಆಪರೇಷನ್ ಅಜಯ್ ತಂಡದಲ್ಲಿ ಭಾಗಿಯಾಗಿದ್ದರು. ಏರ್ ಇಂಡಿಯಾದಲ್ಲಿ (Air India) ಗಗನಸಖಿ (Air Hostess) ಆಗಿರುವ ಅವರು ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆರು ಮಂದಿಯ ತಂಡದಲ್ಲಿ ಇವರು ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ – ತುಟ್ಟಿ ಭತ್ಯೆ ಶೇ. 3.75 ಹೆಚ್ಚಳ
ಮಹಿಮಾರವರು ಇಸ್ರೇಲ್‌ಗೆ ತೆರಳಿದ್ದಾಗ ಕ್ಷಿಪಣಿ ದಾಳಿ ನಡೆಯುತ್ತಿದ್ದುದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೂ ಯಾವುದೇ ಹಿಂಜರಿಕೆಯಿಲ್ಲದೇ 236 ಮಂದಿ ಭಾರತೀಯರನ್ನು ಕರೆತಂದಿದ್ದಾಗಿ ಮಹಿಮಾರವರು ಮಾಹಿತಿ ನೀಡಿದ್ದು, ಈ ಕೆಲಸಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್
Web Stories