ಕೋಲ್ಕತ್ತಾ: ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸಬೇಕು. ಹುಡುಗರು ಸಹ ಸಣ್ಣ ವಯಸ್ಸಿನ ಹುಡುಗಿಯರನ್ನು ಗೌರವಿಸಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ.
ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಯುವಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ. ತಮ್ಮ ದೇಹದ ಸಮಗ್ರತೆ, ಘನತೆ ಮತ್ತು ಸ್ವಾಭಿಮಾನದ ಹಕ್ಕನ್ನು ರಕ್ಷಿಸುವುದು ಯುವತಿಯರ ಕರ್ತವ್ಯವಾಗಿದೆ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ ಮತ್ತು ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ಪೀಠವು, ಹದಿಹರೆಯದ ಹುಡುಗಿಯರು ಎರಡು ನಿಮಿಷಗಳ ಸುಖಕ್ಕಾಗಿ ಸೋಲಬೇಡಿ. ಹದಿಹರೆಯದ ಹುಡುಗರು ಯುವತಿಯರು ಮತ್ತು ಮಹಿಳೆಯರನ್ನು ಗೌರವಿಸಬೇಕು ಎಂದು ಕೋರ್ಟ್ ಸಲಹೆ ನೀಡಿದೆ.
ಒಬ್ಬ ಯುವತಿ ಅಥವಾ ಮಹಿಳೆಯ ಕರ್ತವ್ಯಗಳನ್ನು ಗೌರವಿಸುವುದು ಹುಡುಗರ ಕರ್ತವ್ಯವಾಗಿದೆ. ಮಹಿಳೆಯನ್ನು ಗೌರವಿಸಲು ತನ್ನ ಮನಸ್ಸನ್ನು ಹುಡುಗರು ತರಬೇತಿ ಮಾಡಬೇಕು. ಹೆಣ್ಣಿನ ಸ್ವಾಭಿಮಾನ, ಘನತೆ ಮತ್ತು ಖಾಸಗಿತನದ ಹಕ್ಕನ್ನು ಗೌರವಿಸಬೇಕು ಎಂದು ನ್ಯಾಯಾಲಯ ತಿಳಿಹೇಳಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]