‘ಬಿಗ್ ಬಾಸ್’ ಮನೆಯಲ್ಲಿ ಖಿನ್ನತೆಗೆ ಜಾರಿದ್ದಾರಂತೆ ನಟಿ ಸಂಗೀತಾ ಶೃಂಗೇರಿ

Public TV
2 Min Read
Sangeetha Sringeri 2 1

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಏನಾಗುತ್ತಿದೆ ಎನ್ನುವ ಆತಂಕ ನೋಡುಗರಿಗೆ ಎದುರಾಗಿದೆ. ಇಂದು ಬೆಳಗ್ಗೆ ವಾಹಿನಿಯು ಪ್ರೊಮೊವೊಂದನ್ನು ರಿಲೀಸ್ ಮಾಡಿದ್ದು, ಮನೆಮಂದಿ ಮೇಲೆ ವಿನಯ್ ಜೋರಾಗಿಯೇ ಕೂಗಾಡಿದ್ದಾರೆ. ಅವರು ಧ್ವನಿ ಬಿಗ್ ಬಾಸ್ ಮನೆಯನ್ನೇ ಬೀಳಿಸುವಷ್ಟು ದೊಡ್ಡದಾಗಿತ್ತು. ವಿನಯ್ ಹಾಗೆ ಕೂಗಾಡಲು ಕಾರಣ ನಟಿ ಸಂಗೀತಾ ಶೃಂಗೇರಿ (Sangeetha Sringeri). ಇಡೀ ಮನೆ ಸಂಗೀತಾ ಪರವಾಗಿ ಮಾತನಾಡುತ್ತಿದೆ. ವಿನಯ್ (Vinay) ಕಡೆ ಬೆಟ್ಟು ಮಾಡುತ್ತಿದೆ. ಇದರಿಂದಾಗಿ ವಿನಯ್ ರುದ್ರಾವತಾರ ತಾಳಿದ್ದಾರೆ.

Bigg Boss 12

ಸಂಗೀತಾ ಮತ್ತು ವಿನಯ್ ನಡುವೆ ಇಷ್ಟೊಂದು ವೈಷಮ್ಯ ಬೆಳೆಯುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಸೀರಿಯಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಗುಡ್ ಫ್ರೆಂಡ್ಸ್.. ನೂರಾರು ದಿನಗಳ ಕಾಲ ಒಟ್ಟಿಗೆ ಕಳೆದಿದ್ದಾರೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಟಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಶುರುವಾದ ಇಬ್ಬರ ನಡುವಿನ ವಾಕ್ಸಮರ ಇದೀಗ ಮಾನಸಿಕ ಖಿನ್ನತೆಗೆ ಜಾರುವಂತೆ ಮಾಡಿದ್ದು ವಿಪರ್ಯಾಸ.

FotoJet 5 1

ಹೌದು, ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಖಿನ್ನತೆಗೆ (Depression) ಜಾರಿದ್ದಾರಂತೆ. ಹಾಗಂತ ಅವರೇ  ಈ ಮಾಹಿತಿಯನ್ನು ಇತರ ಕಂಟೆಸ್ಟೆಂಟ್ ಮುಂದೆ ಹೇಳಿಕೊಂಡಿದ್ದಾರೆ. ಸಂಗೀತಾ ಅವರು ಒಬ್ಬೊಬ್ಬರೇ ಕ್ಯಾಮೆರಾ ಮುಂದೆ ನಿಂತು ಮಾತನಾಡೋದನ್ನ, ಒಬ್ಬೊಬ್ಬರೇ ಕೂತು ಅಳೋದನ್ನು ಮನೆಮಂದೆ ನೋಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ ವಿನಯ್ ಎನ್ನುವುದು ಎಲ್ಲರ ಆರೋಪವಾಗಿದೆ. ಹೀಗಾಗಿ ಸಂಗೀತಾ ವಿಷಯದಲ್ಲಿ ವಿನಯ್ ಟಾರ್ಗೆಟ್ ಆಗಿದ್ದಾರೆ.

Sangeetha Sringeri 1 1

ಸಂಗೀತಾ ಮತ್ತು ವಿನಯ್ ನಡುವಿನ ಗಲಾಟೆಯಲ್ಲಿ ಭಾಗ್ಯಶ್ರೀ ಅವರು ಪ್ರಶ್ನಿಸುತ್ತಾರೆ. ಇಬ್ಬರ ಮಧ್ಯ ಏನಾಗುತ್ತಿದೆ ಎಂದು ವಿನಯ್‍ ನ ಕೇಳುತ್ತಾರೆ. ಭಾಗ್ಯಶ್ರೀ ಅವರ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ವಿನಯ್ ಗರಂ ಆಗುತ್ತಾರೆ. ‘ಅವಳನ್ನು ಸಮಾಧಾನ ಮಾಡೋಕೆ, ನನ್ನ ಲವ್ವರ್?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಮತ್ತು ಸಂಗೀತಾ ಮಧ್ಯ ಏನಾಗುತ್ತಿದೆ ಎಂದು ಶಾಂತ ರೀತಿಯಲ್ಲಿ ಕೂತುಕೊಂಡು ಯೋಚಿಸಬೇಕಿದ್ದ ವಿನಯ್, ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಕೂಗಾಟ ಮನೆಮಂದಿಗೆಲ್ಲ ಆತಂಕ ಮೂಡಿಸಿದೆ.

 

ಒಂದು ಕಡೆ ‘ನನಗೆ ಈ ಮನೆಯಲ್ಲಿ ಇರೋಕೆ ಭಯವಾಗುತ್ತಿದೆ’ ಎನ್ನುತ್ತಿದ್ದಾರೆ ಸಂಗೀತಾ. ಇನ್ನೊಂದು ಕಡೆ ‘ನನ್ನ ಧ್ವನಿ ಬಂದಾಗ ಕಿವಿ ಮುಚ್ಕೊಳ್ಳಿ’ ಎನ್ನುತ್ತಿದ್ದಾರೆ ವಿನಯ್. ಯಾರೇ ಹೇಳಿದರೂ, ವಿನಯ್ ಶಾಂತವಾಗುವಂತೆ ಕಾಣುತ್ತಿಲ್ಲ. ರಂಪಾಟ ಮನೆಯಲ್ಲಿ ಇನ್ನೂ ಜಾಸ್ತಿಯೇ ಆಗುತ್ತಿದೆ. ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಕೋಪವನ್ನು ಬಿಗ್ ಬಾಸ್ ಹೇಗೆ ತಣ್ಣಗೆ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.

Web Stories

Share This Article