ನನ್ನನ್ನ ಬಿಟ್ಟುಬಿಡು ಬಿಗ್ ಬಾಸ್: ತಾರಕಕ್ಕೇರಿದೆ ಸಂಗೀತಾ-ವಿನಯ್ ಜಗಳ

Public TV
1 Min Read
Bigg Boss 2 11

ನಿನ್ನೆ ಸಂಗೀತಾಗೆ (Sangeetha Sringeri) ಎಲ್ರೂ ನನ್ನ ಟಾರ್ಗೆಟ್ ಮಾಡ್ತಿದಾರೆ ಅನಿಸ್ತಿದ್ರೆ, ಈವತ್ತು ವಿನಯ್ (Vinay) ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್‌ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ. ‘ಅವ್ಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.

Bigg Boss 3 7

ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್‍‌ ಅಂತ ನಂಗೆ ಅನಿಸುತ್ತದೆ’ ಎಂದು ತಣ್ಣಗೇ ಹೇಳಿದ್ದಾರೆ. ವಿನಯ್ ಅವಳ ಜೊತೆಗೆ ಮಾತನಾಡದೆ ಕಾರ್ತಿಕ್ (Karthik) ಬಳಿಯೇ ತಿರುಗಿ, ‘ನನ್ನ ವೈಸ್‌ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು’ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, ‘ಪ್ಲೀಸ್ ಡಿಲೀಟ್‌ ಮೀ ಇನ್ ಯುವರ್ ಹೆಡ್’ ಎಂದಿದ್ದಾರೆ.

Bigg Boss 1 14

ಸಂಗೀತಾ, ‘ಸ್ಟೋರ್ ಆಗಿದ್ರೆ ಡಿಲೀಟ್ ಮಾಡ್ಬೋದು’ ಎಂದು ಮತ್ತೆ ಕೆಣಕಿದ್ದಾರೆ. ವಿನಯ್ ಸಹನೆಯ ಕಟ್ಟೆಯೊಡೆದು, ‘ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್’ ಎಂದು ಕಿರುಚಿದ್ದಾರೆ. ಈ ಮಾತುಗಳು ಬಿಗ್ ಬಾಸ್ ಮನೆಯನ್ನೇ ಬೆಚ್ಚಿ ಬೀಳಿಸಿವೆ.

 

ಹಾಗಾದ್ರೆ ಮನೆಯೊಳಗೆ ಏನು ನಡೀತಿದೆ? ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡಿರುವ ಬೆಂಕಿಕಿಡಿಯನ್ನು ಆರಿಸ್ತಾರಾ ಕಾರ್ತಿಕ್? ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಇಂತಹ ಸಾಕಷ್ಟು ಬೆಂಕಿ ಕಿಡಿಗಳ ದೃಶ್ಯಗಳು JioCinemaದಲ್ಲಿ ಲಭ್ಯವಿವೆ.

Web Stories

Share This Article