ಬೆಂಗಳೂರಲ್ಲಿ ವಿಶ್ವಕಪ್‌ ಪಂದ್ಯಾವಳಿ; ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ

Public TV
1 Min Read
NAMMA METRO 5

ಬೆಂಗಳೂರು: ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ವಿಶ್ವಕಪ್‌ ಟೂರ್ನಿ (Cricket World Cup 2023) ಪಂದ್ಯಗಳಿಗಾಗಿ ‘ನಮ್ಮ ಮೆಟ್ರೋ’ದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ.

ಇದೇ ಅಕ್ಟೋಬರ್ 20, 26 ಹಾಗೂ ನವೆಂಬರ್ 4, 9, 12 ರಂದು ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ದಿನದಂದು ರಿಟರ್ನ್ ಜರ್ನಿ ಟಿಕೆಟ್‌ಗಳನ್ನು ಎಲ್ಲ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಬೆಳಗ್ಗೆ 7 ರಿಂದ ಪಡೆಯಬಹುದು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಒಂದು ಸಾವಿರ ಕೋಟಿ ಲಂಚ ಸಂಗ್ರಹ: ಎನ್.ರವಿಕುಮಾರ್

chinnaswamy stadium

ಈ ರಿಟರ್ನ್ ಟಿಕೆಟ್ ಬೆಲೆ 50 ರೂ. ಇರಲಿದೆ. ಸಾಮಾನ್ಯ ದರದ 5% ರಿಯಾಯಿತಿ ಕೂಡ ಇರಲಿದೆ. ಈ ಟಿಕೆಟನ್ನು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆ ನಂತರ ಒಂದು ಪ್ರಯಾಣ ಮಾಡಬಹುದಾಗಿದೆ.

ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಿದರೆ, ಪಂದ್ಯಗಳು ನಡೆಯುವ ದಿನಗಳಂದು ಪ್ರಯಾಣಿಸಬಹುದು. ಕ್ಯೂಆರ್ ಕೋಡ್ ಟಿಕೆಟನ್ನು ವಾಟ್ಸಪ್, ನಮ್ಮ ಮೆಟ್ರೋ ಆ್ಯಪ್ ಅಥವಾ ಪೇಟಿಎಂ ಮೂಲಕ ಮುಂಗಡವಾಗಿ ಪಡೆಯಬಹುದು. ಇದನ್ನೂ ಓದಿ: ITದಾಳಿ ಜಟಾಪಟಿ; ಕಲೆಕ್ಷನ್ ಟಾಸ್ಕ್ ಸ್ಲೇಟ್ ಹಿಡಿದ ಸಚಿವರ ಪೋಸ್ಟರ್ ಹಾಕಿ ಬಿಜೆಪಿ ಟಾಂಗ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article